ವಾಯುಮಾಲಿನ್ಯ ಭೀಕರ ಪ್ರಮಾಣಕ್ಕೆ ತಲುಪುತ್ತಿರುವ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. “ನಾನು ದೆಹಲಿಯಲ್ಲಿ ಮಾತ್ರ ಎರಡು ದಿನ ಇದ್ದರೆ ಸಾಕು, ನನಗೆ ಅಲರ್ಜಿ ಸಮಸ್ಯೆ ಕಾಣಿಸುತ್ತದೆ” ಎಂದು ಹೇಳಿದ್ದು, ಅಲ್ಲಿನ ವಾಯುಮಾಲಿನ್ಯದ ತೀವ್ರತೆಯನ್ನು ತಿಳಿಸಿದ್ದಾರೆ.
ಇಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಗಡ್ಕರಿ ಮಾತನಾಡಿದ್ದಾರೆ. ದೆಹಲಿಯ ವಾಯುಮಾಲಿನ್ಯಕ್ಕೆ ವಾಹನಗಳು ಶೇ.40ರಷ್ಟು ಹೊಣೆಗಾರರಾಗಿವೆ. ಇತರ ಕೈಗಾರಿಕಾ ಹಾಗೂ ಮನೆಬಳಕೆಯ ಕಾರಣಗಳು ತೀರಿದರೂ, ಮುಖ್ಯ ಕಾರಣ ವಾಹನಗಳ ನಿರ್ಗಮನವಾಗಿದೆ ಎಂದು ಅವರು ಹೇಳಿದರು.
“ಮಾಲಿನ್ಯ ಪರಿಹಾರಕ್ಕೆ ಜಾಗೃತರಾದರೂ ನಾವು ಪ್ರತಿವರ್ಷ ₹22 ಲಕ್ಷ ಕೋಟಿ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದು ದೇಶದ ಆರ್ಥಿಕತೆಗೆ ಮತ್ತು ಪರಿಸರಕ್ಕೆ ಒತ್ತಡ ಹೆಚ್ಚಿಸುತ್ತಿದೆ” ಎಂದು ವಸ್ತುನಿಷ್ಠ ಮಾಹಿತಿಯನ್ನು ನೀಡಿದರು.
ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲು ಹೈಡ್ರೋಜನ್ ಚಾಲಿತ ಮತ್ತು ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಹೆಚ್ಚಿಸಬೇಕು. ಇದು ವಾಯುಮಾಲಿನ್ಯವನ್ನು ಕಡಿಮೆ ಮಾಡುವದು ಮಾತ್ರವಲ್ಲ, ಇಂಧನ ಆಮದು ಮೇಲಿನ ಒತ್ತಡವನ್ನೂ ಕಡಿಮೆ ಮಾಡುತ್ತದೆ ಎಂದು ಸಮಸ್ಯೆಗೆ ಪರಿಹಾರವನ್ನು ನೀಡಿದ್ದಾರೆ.
ಗಡ್ಕರಿ ಹೇಳಿಕೆ ಪ್ರಕಾರ, ದೆಹಲಿಯ ವಾಯುಮಾಲಿನ್ಯ ಆರೋಗ್ಯಕ್ಕೆ ತೀವ್ರ ಅಪಾಯಕಾರಿಯಾಗಿದೆ. ಉಸಿರಾಟದ ಕಾಯಿಲೆಗಳು, ಅಲರ್ಜಿ, ಸೀನೋಸೈಟಿಸ್ ಮತ್ತು ಇತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಇದು ಪ್ರಮುಖ ಕಾರಣವಾಗುತ್ತದೆ. ಸಚಿವರು ತಮ್ಮದೇ ಅನುಭವವನ್ನು ಹಂಚಿಕೊಂಡು ಜನರಲ್ಲಿ ಜಾಗೃತಿ ಮೂಡಿಸಿದರು.
ವರದಿ : ಲಾವಣ್ಯ ಅನಿಗೋಳ




