Mandya News: ಮಂಡ್ಯ: ಮಂಡ್ಯದ ಮದ್ದೂರಿನ ಅವ್ವೇರಹಳ್ಳಿ ಗ್ರಾಮದಲ್ಲಿ ಚಿಕ್ಕರಸಿಕೆರೆ ಬಸಪ್ಪ ಪವಾಡ ಮಾಡಿದ್ದು, ಮಾಯಮ್ಮ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿಕೊಟ್ಟಿದೆ.
ಚಿಕ್ಕರಸಿಕೆರೆ ಬಸಪ್ಪ ಅಂದ್ರೆ, ಬಸವ. ಈತನನ್ನು ದೇವರ ಬಸಪ್ಪ ಅಂತಲೇ ಕರೆಯುತ್ತಾರೆ. ಈ ಗ್ರಾಮದಲ್ಲಿ ದೇಗುಲ ನಿರ್ಮಾಣ ಜಾಗದ ಸ್ಥಳಾಂತರ ಸಮಸ್ಯೆ ಉಂಟಾಗಿತ್ತು. ಈ ಸಮಸ್ಯೆ ಬಗೆಹರಿಯದೇ, ದೇಗುಲ ನಿರ್ಮಿಸಲು ಸಾಧ್ಯವಾಗದೇ, ಗ್ರಾಮಸ್ಥರು ಕಂಗಾಲಾಗಿದ್ದರು.
ಹಾಗಾಗಿ ಈ ಜಾಗದ ಸಮಸ್ಯೆ ಬಗೆ ಹರಿಸಲು ಗ್ರಾಮಸ್ಥರು ಚಿಕ್ಕರಿಸಿನಕೆರೆ ಬಸಪ್ಪನ ಮೊರೆ ಹೋಗಿದ್ದರು. ಹಾಗಾಗಿ ಗ್ರಾಮಕ್ಕೆ ಬಸಪ್ಪನನ್ನು ಬರ ಮಾಡಿಕ“ಂಡ ಜನರು, ಬಸಪ್ಪನಿಗೆ ಪೂಜೆ ಮಾಡಿ, ಜಾಗ ಗುರುತಿಸಲು ಕೋರಿದ್ದಾರೆ.
ಬಳಿಕ ಬಸಪ್ಪ ಕಾಡು ದಾರಿಯಲ್ಲಿ ಹಳ್ಳ ದಾಟಿ ದೇಗುಲ ನಿರ್ಮಾಣಕ್ಕೆ ಜಾಗ ಗುರ್ತಿಸಿ ಕೊಟ್ಟಿದ್ದಾನೆ. ಬಸಪ್ಪ ಗುರ್ತಿಸಿದ ಜಾಗದಲ್ಲಿ ನೂತನ ಮಾಯಮ್ಮ ದೇಗುಲ ನಿರ್ಮಾಣಕ್ಕೆ ಗ್ರಾಮಸ್ಥರು ಕೂಡ ಸಮ್ಮತಿ ಸೂಚಿಸಿದ್ದಾರೆ. ಅಲ್ಲದೇ ಇದು ಯಾರ ಜಾಗವಾಗಿತ್ತೋ, ಆ ವ್ಯಕ್ತಿಯ ಬಳಿ ದೇಗುಲ ನಿರ್ಮಾಣಕ್ಕೆ ಜಾಗ ನೀಡಲು ಕೇಳಲಾಗಿತ್ತು. ಆದರೆ ಆತ ಜಾಗ ನೀಡಲು ತಕರಾರು ಮಾಡಿದ್ದ. ಆದರೆ ಈಗ ಬಸಪ್ಪ ಕೂಡ ಅದೇ ಜಾಗವನ್ನು ಆಯ್ಕೆ ಮಾಡಿದ್ದು, ಮಾಲೀಕ ಜಾಗ ನೀಡಲು ಸಮ್ಮತಿ ಸೂಚಿಸಿದ್ದಾನೆ.




