ಚುನಾವಣೆಗಳಲ್ಲಿ ಜಯ ಗಳಿಸಲು ಹಲವು ಉಚಿತ ಕೊಡುಗೆಗಳನ್ನು ಪ್ರಕಟಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರ ರಾಜ್ಯದ ಪುಣೆ ಚುನಾವಣೆಯಲ್ಲಿ “ನಮಗೆ ಮತ ಹಾಕಿ, ಎಸ್ಯುವಿ, ಚಿನ್ನ, ಸೈಟು ಗೆಲ್ಲಿ, ಥೈಲ್ಯಾಂಡ್ಗೆ ಪ್ರವಾಸ ಹೋಗಿ’ ಎಂಬಂತಹ ವಿಶಿಷ್ಠ ಆಫರ್ಗಳನ್ನು ಆಕಾಂಕ್ಷಿಗಳು ನೀಡಿದ್ದಾರೆ.
ಲೋಹನ್ – ಧನೋರಿ ವಾರ್ಡ್ ಅಭ್ಯರ್ಥಿಯೊಬ್ಬರು ಲಕ್ಕಿ ಡ್ರಾ ಮೂಲಕ 11 ಮಹಿಳಾ ಮತದಾರರಿಗೆ, 1 ಗುಂಟೆ ಸೈಟ್ ನೀಡುವುದಾಗಿ ಘೋಷಿಸಿದ್ದಾರೆ. ಮತದಾರರಿಗೆ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಅದೇ ರೀತಿ, ವಿಮಲ್ನಗರ ವಾರ್ಡ್ ತನ್ನ ಮತದಾರ ಓಲೈಕೆಗೆ, ಕೆಲವು ಜೋಡಿಗಳನ್ನು 5 ದಿನಗಳ ಥೈಲ್ಯಾಂಡ್ ಪ್ರವಾಸ ಕಳುಹಿಸುವುದಾಗಿ ಅಭ್ಯರ್ಥಿಯು ಹೇಳಿದ್ದಾರೆ.
ಯುವ ಮತದಾರರನ್ನು ಸೆಳೆಯಲು ಕ್ರಿಕೆಟ್ ಪಂದ್ಯಗಳನ್ನು ಆಡಿಸುವುದಾಗಿಯೂ ಭರವಸೆಗಳನ್ನು ನೀಡಿದ್ದಾರೆ. ಮತ್ತು 1 ಲಕ್ಷ ರೂ. ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಮಹಿಳೆಯರಿಗೆ ಪೈಥಾನಿ ಸೀರೆಗಳನ್ನು ಕೊಡುಗೆ ನೀಡಿರುವುದಾಗಿ ತಿಳಿಸಿದ್ದಾರೆ. ಎಲ್ಲವನ್ನೂ ಲಕ್ಕಿ ಡ್ರಾನಲ್ಲಿ ನೀಡುವುದಾಗಿ ಅಭ್ಯರ್ಥಿಗಳು ಘೋಷಿಸಿದ್ದಾರೆ.




