ಕೇವಲ ಎರಡು ವರ್ಷಗಳ ಹಿಂದೆ… ಬಾಂಗ್ಲಾದೇಶ ಎಂದರೆ ಭಾರತಕ್ಕೆ ಮುದ್ದಿನ ನೆರೆ ರಾಷ್ಟ್ರ. ಅಪಾರ ಪ್ರೀತಿ. ಪಾಕ್ ರಾಕ್ಷಸನ ಅತಿಕ್ರಮದಿಂದ ಮುಕ್ತಗೊಳಿಸಿದ್ದು ಭಾರತ. ”ಆಮರ್ ಸೋನಾರ್ ಬಾಂಗ್ಲಾ,” ಎನ್ನುತ್ತಾ ಬಾಂಗ್ಲಾವನ್ನು ಚಿನ್ನದ ಭೂಮಿಗೆ ಹೋಲಿಸಿ, ಅವರಿಗೆ ರಾಷ್ಟ್ರಗೀತೆಯನ್ನು ಬರೆದುಕೊಟ್ಟಿದ್ದು ನಮ್ಮ ಟ್ಯಾಗೋರರೆಂಬ ಹಿರಿಮೆ. ಜಲ – ವಿದ್ಯುತ್ ಯೋಜನೆಗಳಿಗೆ ಸಾವಿರಾರು ಕೋಟಿ ಸಹಾಯ, ಜವಳಿ ವ್ಯಾಪಾರ – ಬಂಗಾಳದ ಹತ್ತಿ – ಢಾಕಾದ ಅಂಗಿ – ಜವಳಿ— ರಕ್ತ ಸಂಬಂಧದ ವ್ಯಾಪಾರ… ಭಾರತದಿಂದಲೇ ಚಪ್ಪಾಳೆ – ಶಿಳ್ಳೆ. ಅಂದ್ರೆ ಕ್ರಿಕೆಟ್ ಅಂಗಳದಲ್ಲಿ ಪಾಕಿಸ್ತಾನದ ವಿರುದ್ಧ ಬಾಂಗ್ಲಾವನ್ನು ನಾವು ಚಪ್ಪಾಳೆ ಹೊಡೆದು ಬೆಂಬಲಿಸಿದ್ವಿ. ಒಂದೇ ರಕ್ತ… ಒಂದೇ ಸಂಸ್ಕೃತಿ… ಅಂತ ನಾವು ಹತ್ತಿರದವರಾದ್ವಿ. ಆದ್ರೆ ಅವೆಲ್ಲ ಕಳೆದ ದಿನಗಳ ಕನಸುಗಳು. ಆದರೆ ಇಂದು, ನಮ್ಮದು ನಮ್ಮವರು ಅಂತ ಅಂದುಕೊಂಡಿದ್ದಂತಹ ಬಾಂಗ್ಲಾದೇಶ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡ್ತಿದೆ. ಇಂದು ಬಾಂಗ್ಲಾದೇಶ ಹೆಸರೇ ಕೇಳಿದರೂ ಭಾರತೀಯ ಕೂಡ ಹಲ್ಲು ಗಿಂಜುವ ಸ್ಥಿತಿ ನಿರ್ಮಾಣವಾಗಿದೆ. ನಾವು ಕಟ್ಟಿದ ವಿಶ್ವಾಸವನ್ನೇ ಅವರು ತುಂಡು ತುಂಡಾಗಿ ಮಾಡಿ ಒಡೆದು ಚೂರುಮಾಡಿದ್ದಾರೆ.
ಪೂರ್ತಿ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ – https://youtu.be/04mtr-Ezcps?si=bMcOt88qlOimRXrS
ಹೌದು… ಹಸೀನಾ ಸರಕಾರ ಬಿದ್ದ ನಂತರ… ವಾಹಕ ಪ್ರಧಾನಿಯಾಗಿ ಪ್ರಭಾವಕ್ಕೆ ಬಂದವರು – ಮೊಹಮ್ಮದ್ ಯೂನಸ್. ನೊಬೆಲ್ ಬಹುಮಾನ ಪಡೆದ ವ್ಯಕ್ತಿ. ಅವರು ದೇಶ ಸುಧಾರಣೆ ಮಾಡ್ತಾರೆ ಅನಿಸಿತ್ತು. ಆದರೆ ಏನ್ ಮಾಡಿದ್ರು? ಉರಿಯುವ ಬೆಂಕಿಗೆ ಆತ ಕೂಡ ತುಪ್ಪ ಸುರಿಯುತ್ತಿದ್ದಾನೆ. ಶಾಂತಿ ನೋಬೆಲ್ ಪಡೆದ ವ್ಯಕ್ತಿ — ದೇಶ ಸುಡುವ ರಾಜಕಾರಣ ಮಾಡುತ್ತಿದ್ದಾರೆ. ಯಾಕೆ? ಯೂನಸ್ ಗೆ ಇಷ್ಟೇ ಭಯ… ಅವರಿಗೆ ಚುನಾವಣೆ ನಡೆಯಬಾರದು… ಅವರ ಗುಂಪಿನ NCP ಅಧಿಕಾರಕ್ಕೆ ಬರದೇ ಇದ್ದರೆ… BNP ಬಂದರೆ? ಅವರಿಗೆ ದೇಶ ಬಿಟ್ಟು ಗಡಿಯಾಚೆ ಓಡಬೇಕಾಗುತ್ತದೆ. ಸದ್ಯ ಅದರ ನೆರವಿಗೆ ಬರ್ತಿದ್ದೇ…ಮತಾಂಧರು + ಅರಾಜಕತೆ.
ದೇಶಕ್ಕೆ ಸ್ಥೈರ್ಯ ಬೇಡ, ಅರಾಜಕತೆ ಇರಲಿ… ಆಗಲೇ ಅಧಿಕಾರವನ್ನ ಸರಿಯಾಗಿ ಉಣ್ಣಬಹುದು ಅನ್ನೋ ದುರಾಸೆ. ಅಷ್ಟೇ ಅಲ್ಲ… ಚುನಾವಣೆಗಾಗಿ ಬರುವ ಒತ್ತಡಕ್ಕೆ “ವಿದ್ಯಾರ್ಥಿಗಳನ್ನು” ಮುಂದಿಟ್ಟಿದ್ದಾರೆ. ಚುನಾವಣೆಯನ್ನು ಮುಂದೂಡೋ ಜುಗುಪ್ಸೆ… ಮತಾಂಧರಿಗೆ ಪುನಃ ವೇದಿಕೆ… ಭಾರತದ ವಿರುದ್ಧ ಹಗೆ… ಪಾಕ್ ಮತ್ತು ಚೀನಾ ಕಡೆಗೆ ಕುಣಿತ… ಇವೇ ಯೂನಸ್ ನ ನಿಜವಾದ ಮುಖ. ಆದರೂ… ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಫೆಬ್ರವರಿಯಲ್ಲಿ ಚುನಾವಣೆ ಘೋಷಣೆಯಾಗಿದೆ. ಮತ್ತು ಚುನಾವಣೆ 2024 ರ ಸಾಂವಿಧಾನಿಕ ಬಿಕ್ಕಟ್ಟು ಮತ್ತು ಆವಾಮಿ ಈ ಒಕ್ಕೂಟದ ಅಮಾನತುಗೊಂಡ ದೇಶದ ನಂತರ ಪ್ರಮುಖ ಬದಲಾವಣೆ ತರಬಹುದು. ಈ ಜಾತಿಯ ಸಂಸತ್ತಿನ ಸದಸ್ಯರನ್ನು ಆಯ್ಕೆ ಮಾಡಲಾಗುವುದು, ಆಡಳಿತಾರೂಢ ಪಕ್ಷದ ಬದಲಾವಣೆ ಮತ್ತು ರಾಜಕೀಯ ಸಮತೋಲನವನ್ನು ಹೊಂದಿದೆ, ನಿರ್ಧರಿಸಲಿದೆ.
ಆದ್ರೂ ಕೂಡ ನಮಗೆ ಈಗ ಬಾಂಗ್ಲಾ ಎಂದರೆ ಅಂಥ ಯಾವ ಪ್ರೀತಿಯೂ ಹುಟ್ಟುವುದಿಲ್ಲ. ಅಷ್ಟರ ಮಟ್ಟಿಗೆ ಬಾಂಗ್ಲಾ, ಭಾರತ ಇಟ್ಟಿದ್ದ ನಂಬಿಕೆ, ವಿಶ್ವಾಸವನ್ನು ಛಿದ್ರಛಿದ್ರಗೊಳಿಸಿದೆ. ನೊಬೆಲ್ ಶಾಂತಿ ಪುರಸ್ಕೃತ ಯೂನಸ್ ಕನಿಷ್ಠ ತಮಗೆ ದೊರಕಿದ್ದ ಗೌರವಕ್ಕಾದರೂ ನ್ಯಾಯ ಒದಗಿಸುವ ಕೆಲಸ ಮಾಡಬೇಕಿತ್ತು. ದೇಶವನ್ನ ಸರಿಯಾದ ದಾರಿಗೆ ತರ್ತಾರೆ ಅನ್ನುವ ಊಹೆಗಳೆಲ್ಲ ಈಗ ಬುಡಮೇಲಾಗಿದೆ. ಹಾಗಾಗಿಯೇ ಚುನಾವಣೆ ಮುಂದೂಡಲು ಈಗ ದೇಶದಲ್ಲಿ ರಾದ್ಧಾಂತ ಎಬ್ಬಿಸುತ್ತಿರುವುದು.
ಬಾಂಗ್ಲಾದಲ್ಲೂ ಇದೆ ಅಲ್ವೇ ಚಿಕನ್ ನೆಕ್. ಸಿಲಿಗುರಿ ಕಾರಿಡಾರ್ – ಭಾರತದ ಚಿಕನ್ ನೆಕ್… ಭಾರತ & ಈಶಾನ್ಯ ರಾಜ್ಯಗಳ ನಡುವಿನ 20-30km ಅಗಲದ ಜೀವನಾಡಿ… ಬಾಂಗ್ಲಾ ಹೇಳ್ತಿದೆ… ಇದನ್ನು ಕತ್ತರಿಸುತ್ತೇವೆ… ಹೀಗಂತ ಬೆದರಿಕೆ ಒಡ್ಡುತ್ತಿದೆ. ಆದರೆ, ಇದು ಬಾಂಗ್ಲಾಕ್ಕೆ ಹೇಳಿದಷ್ಟು ಸುಲಭವಲ್ಲ. ಯಾಕಂದ್ರೆ ಇನ್ನು ಈ ಚಿಕನ್ ನೆಕ್ ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶದಲ್ಲೂ ಇದೆ. ಅದೇ ಚಿತ್ತಗಾಂಗ್ ಪ್ರದೇಶ. ಉತ್ತರಕ್ಕೆ ಭಾರತ, ದಕ್ಷಿಣಕ್ಕೆ ಸಮುದ್ರ… ಕೇವಲ 20-25km… ಜೊತೆಗೆ ಅಲ್ಲಿರುವುದು ತ್ರಿಪುರಾದ ಹಿಂದೂ ಬುಡಕಟ್ಟು ಜನಾಂಗ… ಆದ್ರೆ ಭಾರತ ಯಾಕೆ ಹೇಳ್ತಿಲ್ಲ? ವ್ಯತ್ಯಾಸ ಇಷ್ಟೇ… ಯಾಕೆಂದರೆ ಬೆದರಿಕೆ ರಾಜಕೀಯ ಮಾಡೋದು ನಮ್ಮ ರಕ್ತದಲ್ಲೇ ಇಲ್ಲ ಅನ್ನೋದು.
ಬಾಂಗ್ಲಾವನ್ನು ‘ಹಾದಿ’ ತಪ್ಪಿಸಿದ್ದು ಯಾರು? ಬೇರಾರು ಅಲ್ಲ… ಶರೀಫ್ ಉಸ್ಮಾನ್ ಹಾದಿ… ಹಸೀನಾ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ. ಭಾರತ ವಿರೋಧಿ ನೀತಿಯಿಂದಲೇ ಬಾಂಗ್ಲಾದಲ್ಲಿ ಈತ ಮುಂಚೂಣಿಗೆ ಬಂದಿದ್ದ. ಆತ ಹಸೀನಾ ಸರಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದ. ರಾಷ್ಟ್ರೀಯತೆಯ ಹೆಸರಿನಲ್ಲಿ ಭಾರತ ವಿರೋಧಿ ವಿಷವನ್ನು ಎರಚುತ್ತಿದ್ದ. ಬಾಂಗ್ಲಾದ ಸಾರ್ವಭೌಮತ್ವವನ್ನು ಭಾರತದ ಪದತಳಕ್ಕೆ ಇಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದ. ಆಗ ಯೂನಸ್ ಭಯಪಟ್ಟರು… ಆತನ ಜನಪ್ರಿಯತೆಯನ್ನು ಸಹಿಸದ ಯೂನಸ್, ಹಾದಿ ಸ್ಥಾಪಿಸಿದ್ದ ‘ಇಂಕ್ವಿಲಾಬ್ ಮಂಚ್’ ಎಂಬ ಪಕ್ಷವನ್ನು ನಿರ್ಬಂಧಿಸಿದ್ದ. ಇದರಿಂದ ಆತ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ.
ತನ್ನ ಚುನಾವಣೆ ಪ್ರಚಾರದಲ್ಲೂ ಭಾರತ ವಿರೋಧಿ ಭಾಷಣಗಳ ಮೂಲಕ ಜನ ಬೆಂಬಲ ಪಡೆದಿದ್ದ. ಆಮೇಲೆ ಏನಾಯ್ತು? ಡಿಸೆಂಬರ್ 12… ಹತ್ಯೆ ಯತ್ನ… ಚುನಾವಣಾ ಪ್ರಚಾರ ಮುಗಿಸಿ ತನ್ನ ಸಹಚರರೊಂದಿಗೆ ಇದ್ದಾಗ ಈ ಘಟನೆ ನಡಿಯತ್ತೆ. 6 ದಿನಗಳ ಸಾವು ಬದುಕಿನ ಆಟ… ಜೀವ–ಮರಣ ಹೋರಾಟ… ಕಡೆಗೂ ಹಾದಿ ಸಾವು… ಅಂದ್ರೆ ಕೊನೆಯುಸಿರೆಳೆದಿದ್ದ. ಇಡೀ ಬಾಂಗ್ಲಾದಲ್ಲಿ ಬೂದಿಮುಚ್ಚಿದ್ದ ಕೆಂಡದಂತ ಪರಿಸ್ಥಿತಿ… ಬಾಂಗ್ಲಾ ಮತ್ತೆ ಕಂಗಾಲು… ಈ ನಡುವೆಯೇ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿಯ ಹತ್ಯೆ ಮತ್ತೆ ದೇಶದಲ್ಲಿ ಗಲಭೆ ಹತ್ತಿಸಿತ್ತು. ದುರಂತವೆಂದರೆ, ಇಲ್ಲೂ ಟಾರ್ಗೆಟ್ ಆಗಿದ್ದೂ ಹಿಂದೂಗಳೇ… ಮತ್ತೆ ಅರಾಜಕತೆ… ಮತ್ತೆ ಹಿಂದೂಗಳೇ ಟಾರ್ಗೆಟ್. ಹಿಂದೂಗಳ ರಕ್ತವೇ ಅವರ ರಾಜಕೀಯಕ್ಕೆ ಇಂಧನ!!!
ಬಾಂಗ್ಲಾದ ಅಸ್ಥಿರತೆ ಭಾರತದ ಭದ್ರತೆಗೂ ಸ್ಫೋಟಕ… ಹೌದಾ? ಹಾಗಾದ್ರೆ ಭಾರತಕ್ಕೆ ಏಕೆ ದೊಡ್ಡ ಅಪಾಯ? ಅಂತ ಕೇಳೋದಾದ್ರೆ… ಭಾರತ ಈಗಾಗಲೇ ಪಾಕಿಸ್ತಾನ, ಚೀನಾದಿಂದ ಬೆದರಿಕೆ ಎದುರಿಸುತ್ತಿದೆ. ಇದೇ ವೇಳೆ, ಬಾಂಗ್ಲಾದಲ್ಲೂ ಭಾರತ ವಿರೋಧಿ ಘಟನೆಗಳು ನಡೆಯುತ್ತಿರುವುದು ತುಂಬಾ ಅಪಾಯಕಾರಿ. ಚೀನಾ, ಪಾಕಿಸ್ತಾನ ಜೊತೆಗೆ ಬಾಂಗ್ಲಾ ಸೇರಿಸಿದರೆ Two-front war ಅಲ್ಲ Three-front war ಎದುರಿಸಬೇಕಾಗತ್ತೆ. ಸದ್ಯ ಪಾಕ್–ಚೀನಾಗೆ ಭಾರತಕ್ಕೆ ಹಾನಿ ಮಾಡೋ ವೇದಿಕೆ ಅಂದ್ರೆ ಅದು ಬಾಂಗ್ಲಾ.
ISI ಏಜೆಂಟರು ಈಗಾಗಲೇ ಬಾಂಗ್ಲಾದಲ್ಲಿ ಹೊಸ ಜಾಲ ಬಿಚ್ಚಿದ್ದಾರೆ. ಪಾಕ್ ಅಧಿಕಾರಿಗಳ ಗುಪ್ತ ಭೇಟಿಗಳು ಈಗಾಗಲೇ ಚಟುವಟಿಕೆಗಳು ಶುರು ಆಗಿದೆ. ಚೀನಾ ಮಿಲಿಟರಿ ಪ್ರವೇಶ… ಈಶಾನ್ಯ ಪ್ರತ್ಯೇಕಗೊಳಿಸೋ ಹೇಳಿಕೆ… ಬಾಂಗ್ಲಾದಲ್ಲಿ ಅಸ್ಥಿರತೆ ಉಂಟಾದಾಗಲೆಲ್ಲ ಅಲ್ಲಿನ ಜನ ಭಾರತದ ಗಡಿ ದಾಟುತ್ತಾರೆ. ಅಂದ್ರೆ ಭಾರತಕ್ಕೆ ಹೊಸ ವಲಸೆ ಆತಂಕ… ಭಾರತಕ್ಕೆ ಶತ್ರುಗಳ ಕೊರತೆಯೇ ಇಲ್ಲ… ಆದ್ರೂ ಕೂಡ ಮೂರನೇ ಶತ್ರು ಬೇಕಾಗಿಲ್ಲ. ಯಾಕಂದ್ರೆ ಈ ಬೆಳವಣಿಗೆ ಭಾರತದ ಭದ್ರತೆಗೆ ಸವಾಲಾಗುತ್ತಿದೆ. ಪ್ರಮುಖ ಆರೋಪಿ — ಫೈಜಲ್ ಕರೀಂ… 20 ಮಂದಿ ಬಂಧನ… ಒಬ್ಬ ಕಾರ್ಪೋರೇಟರ್ ಕೈವಾಡ… ಕೋಟ್ಯಂತರ ಹಣ ಟ್ರಾನ್ಸ್ಫರ್… ಎಲ್ಲ ಸಾಕ್ಷಿ ಬಾಂಗ್ಲಾದೊಳಗೆ ಇದೆ. ಆದರೂ… ಯೂನಸ್ ಹೇಳ್ತಾರೆ… ಬೊಟ್ಟು ಮಾಡಿ ತೋರಿಸ್ತಾರೆ… ಹತ್ಯೆಗಾರರು ಭಾರತದ ಗಡಿ ದಾಟಿದ್ದಾರೆ… ಕಿಲ್ಲರ್ಸ್ ಇಂಡಿಯಾದಲ್ಲೇ ಇದ್ದಾರೆ… ಅವರನ್ನು ಹಸ್ತಾಂತರಿಸಿ… ನಮಗೆ ಕೊಡಿ… ಹೀಗಂತ ಭಾರತದ ಮೇಲೆ ಗೂಬೆ ಕೂರಿಸ್ತಿದೆ ಯೂನಸ್ ಸರ್ಕಾರ. ಸತ್ಯ ಗೊತ್ತಿದ್ದರೂ ದೋಷಿಸೋದು ಮಾತ್ರ ಭಾರತ ಮೇಲೇ…
ಶೇಖ್ ಹಸೀನಾ ಅಧಿಕಾರ ಹಾಗೂ ದೇಶ ತ್ಯಜಿಸಿದ ನಂತರ ದೊಡ್ಡ ಮಟ್ಟದಲ್ಲಿ ಗಲಭೆ ಸಂಭವಿಸಿತು. ಹಿಂದೂಗಳ ಮನೆ – ಪೂಜಾ ಸ್ಥಳ – ವ್ಯಾಪಾರ ಸ್ಥಳಗಳ ಮೇಲೆ ದಾಳಿ ನಡೆಸಿ, ಲೂಟಿ ಮಾಡ್ತು… ಹಲವರನ್ನು ಕೊಂದೆ ಹಾಕ್ತು. ಸರಕಾರ ಸಾವನ್ನಪ್ಪಿದ ಹಿಂದೂಗಳ ಕುರಿತ ತೋರಿಕೆಯ ಲೆಕ್ಕ ಕೊಡುತ್ತಿದೆಯಾದರೂ ಅಸಲಿ ಲೆಕ್ಕ ಬಹಿರಂಗ ಆಗ್ತಾನೆ ಇಲ್ಲ. 2024ರ ಆಗಸ್ಟ್ 5ರಿಂದ 20ರ ನಡುವೆ 49 ಜಿಲ್ಲೆಗಳಲ್ಲಿ 1068 ದಾಳಿಗಳು ನಡೆದಿವೆ. ಇದರಲ್ಲಿ ಹೆಚ್ಚಿನ ದಾಳಿ ಖುಲ್ನ ಪ್ರದೇಶದಲ್ಲಿ ನಡೆದಿದ್ದು, 295 ಹಿಂದೂಗಳ ಮನೆ ಹಾಗೂ ಅಂಗಡಿಗಳನ್ನು ನಾಶಪಡಿಸಲಾಗಿದೆ.
ರಂಗಪುರದಲ್ಲಿ 219, ಮೈಮೈಸಿಂಗಲ್ಲಿ 183, ರಾಜ್ಶಾಹಿಯಲ್ಲಿ 155, ರಾಜಧಾನಿ ಢಾಕಾದಲ್ಲಿ 79, ಬರಿಶಾಲ್ ನಲ್ಲಿ 68, ಚಿತ್ತಗಾಂಗ್ ನಲ್ಲಿ 45 ಹಾಗೂ ಶಿಲೆಟ್ನಲ್ಲಿ 25 ಹಿಂದೂಗಳ ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಬಾಂಗ್ಲಾದೇಶದ ಪರಿಸ್ಥಿತಿ ಬಗ್ಗೆ ಶಶಿ ತರೂರು ಅಧ್ಯಕ್ಷತೆಯ ಭಾರತೀಯ ವಿದೇಶಾಂಗ ಇಲಾಖೆಯ ಪಾರ್ಲಿಮೆಂಟರಿ ಕಮಿಟಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಅದರಲ್ಲಿ ಈಗಿನ ಬಾಂಗ್ಲಾದ ಪರಿಸ್ಥಿತಿ ಪ್ರಮುಖ ಕಾರಣಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಪ್ರಮುಖವಾದುದು ಜನರೇಶನಲ್ ಡಿಸ್ ಕಂಟಿನ್ಯೂಟಿ, ಅಂದರೆ 1971ರಲ್ಲಿ ಭಾರತ, ಪಾಕಿಸ್ತಾನವನ್ನು ವಿಭಜಿಸಿ ಬಾಂಗ್ಲಾದೇಶದ ರಚನೆ ಮಾಡಿತ್ತು. ಆ ವೇಳೆ ಬಾಂಗ್ಲಾದ ಜನರು ಭಾರತಕ್ಕೆ ಕೃತಜ್ಞರಾಗಿದ್ದರು. ಆದರೆ, ಯುವಜನಾಂಗಕ್ಕೆ ಭಾರತ ಮಾಡಿದ ಉಪಕಾರದ ಅರಿವಿಲ್ಲದೆ ಭಾರತ ವಿರೋಧಿಯಾಗಿ ವರ್ತಿಸುತ್ತಿದ್ದಾರೆ ಎಂದು ವರದಿ ಹೇಳಿದೆ. ಭವಿಷ್ಯದಲ್ಲಿ ಬಾಂಗ್ಲಾಗೆ ತನ್ನ ತಪ್ಪಿನ ಅರಿವಾಗಿ, ಮತ್ತೆ ಸ್ನೇಹಿತನಗತ್ತಾ? ಅನ್ನೋದು ಕಾದುನೋಡಬೇಕಿದೆ.
ಇನ್ನು ಪಾಕಿಸ್ತಾನ ಹಳೆಯ ದಿನದಿಂದಲೇ ಭಾರತದ ಶತ್ರು ಆದರೆ ಬಾಂಗ್ಲಾದೇಶ? ನಾವು ಬಂದು… ರಕ್ತ ಸುರಿದು… ಪ್ರಾಣ ಒಡ್ಡಿ… ಅವರನ್ನು ರಕ್ಷಿಸಿದ್ದೇ ನಾವು… ಅವರು ಇಂದು ಬದುಕಿನಲ್ಲಿ ಬಂಗಾರದ ಕನಸು ಕಾಣುತ್ತಿದ್ದರೆ ಅದಕ್ಕೆ ಕಾರಣ ಭಾರತ. ಆದರೆ… ಅಲ್ಲಿ ಸ್ನೇಹ ಸಾಯುತ್ತಿದೆ… ನಂಬಿಕೆ ಕೊಲ್ಲಲ್ಪಡುತ್ತಿದೆ… ವಿಶ್ವಾಸ ಬೆಲೆ ಇಲ್ಲ. ಬಾಂಗ್ಲಾದೇಶ… ಪಾಕಿಸ್ತಾನದ ಹಳೆಯ ಪಾಠ ಪುನರಾವರ್ತನೆ ಮಾಡುತ್ತಿದೆ. ಮತ್ತು ಅಂತ್ಯದ ದಿನಗಳಲ್ಲಿ ಶತ್ರುವಿನ ನೆರಳಲ್ಲಿ ನಿಂತವರಿಗೆ ಕ್ಷಮೆ ಸಿಗುವುದಿಲ್ಲ — ಉಳಿವು ಸಿಗುವುದಿಲ್ಲ. ಅವರ ರಾಜಕಾರಣ = ಭಾರತ ವಿರೋಧ… ಅವರ ಬದುಕಿನ ಆಹಾರ = ಮತಾಂಧತೆ… ಅವರ ದೇಶದ ಭವಿಷ್ಯ = ಅರಾಜಕತೆ. ಆದ್ರೆ ಪ್ರಶ್ನೆ ಒಂದೇ – ಭಾರತ ಇನ್ನೂ ಎಷ್ಟು ದಿನ ಮೌನವಾಗಿರತ್ತೆ? ಹಿಮ್ಮೆಟ್ಟಿದ್ರೆ ಗಡಿಗಳು ಸ್ಫೋಟ… ಕಾರ್ಯಾಚರಣೆ ಮಾಡಿದ್ರೆ ವಿಶ್ವದ ಕಣ್ಣು… ಬಾಂಗ್ಲಾದೇಶಕ್ಕೆ ಒಂದೇ ಸಂದೇಶ — ನಮ್ಮ ಕೈಯಲ್ಲಿ ನೀವು ಕಂಡ ದಯೆಗೂ ಜಾಗ ಇದೆ… ಇದೆ ರೀತಿ ಮುಂದುವರೆದರೆ, ನಮ್ಮ ಕತ್ತಿ ಶಕ್ತಿಯು ನೋಡಬೇಕಾಗತ್ತೆ.




