ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿ ಮದುವೆ ಆಸೆ ತೋರಿಸಿ ಯುವತಿಗೆ ಕೋಟಿ ಕೋಟಿ ರೂಪಾಯಿಗಳ ವಂಚನೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ, ವಿಜಯ್ ರಾಜ್ ಗೌಡ, ಬೋರೆಗೌಡ ಮತ್ತು ಸೌಮ್ಯ ಎಂಬ ಮೂವರ ವಿರುದ್ಧ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವೈಟ್‌ಫೀಲ್ಡ್ ಮೂಲದ ಯುವತಿ, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್, ಮ್ಯಾಟ್ರಿಮೋನಿಯಲ್ ಮೂಲಕ ಪರಿಚಯವಾದ ವ್ಯಕ್ತಿಯ ಮೇಲೆ ಶಿಕಾಯತ್ ಮಾಡಿದ್ದಾರೆ. ಆರೋಪ ಪ್ರಕಾರ, ಈ ವ್ಯಕ್ತಿ ತನ್ನನ್ನು ದೊಡ್ಡ ಉದ್ಯಮಿ ಎಂದು ಪರಿಚಯಿಸಿ, ನಾನು ನೂರಾರು ಕೋಟಿ ಮೌಲ್ಯದ ಆಸ್ತಿ ಹೊಂದಿದ್ದೇನೆ, ನಿನ್ನನ್ನೆ ಮದುವೆ ಮಾಡುತ್ತೇನೆ ಎಂದು ಯುವತಿಗೆ ನಂಬಿಸಿದ್ದಾನೆ.
ಯುವತಿಯನ್ನು ಹಣಕಾಸಿನ ವಿಷಯದಲ್ಲಿ ವಂಚಿಸಿದ್ದು, ಅಪಾರ ಹಣ ಪಡೆದುಕೊಂಡಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ. ಕೆಂಗೇರಿ ಬಳಿ ಯುವತಿಯನ್ನ ಕರೆಯಿಸಿ ಪರಿಚಯ ಮಾಡಿಕೊಟ್ಟಿದ್ದ. ಈ ವೇಳೆ ಹೆಂಡ್ತಿಯನ್ನೇ ಅಕ್ಕ ಎಂದು ಪರಿಚಯ ಮಾಡಿಸಿದ್ದನಂತೆ. ಬಳಿಕ ನನಗೆ ಆಸ್ತಿ ಸಂಬಂಧ ಇಡಿಯಲ್ಲಿ ಕೇಸ್ ದಾಖಲಾಗಿದೆ. ಅಕೌಂಟ್ ಪ್ರಾಬ್ಲಂ ಆಗಿದೆ ಎಂದಿದ್ದ ಆಸಾಮಿ.
ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು, ಕೋರ್ಟ್ ಪ್ರತಿಗಳನ್ನ ಯುವತಿಗೆ ತೋರಿಸಿದ್ದನಂತೆ. ಹಣದ ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ಹಣ ಪಡೆದಿದ್ದ. ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣ ಅಂತ ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದಾನೆ ಎಂದು ಯುವತಿ ದೂರಿದ್ದಾರೆ.
ಆರೋಪಿಯು ತನ್ನ ಬ್ಯಾಂಕ್ ಖಾತೆ ಫ್ರೀಜ್ ಆಗಿದ್ದರೂ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಯುವತಿಗೆ ನಂಬಿಸಿದ್ದ. ಹಣ ವಾಪಸ್ ಕೊಡುತ್ತೇನೆ ಎಂದು 22 ಲಕ್ಷ ರೂ. ಮಾತ್ರ ಮರುವಹಿಸಿ ಉಳಿದ ಹಣ ಕೊಡದಂತೆ ಹಿಂದೇಟು ಹಾಕಿದ್ದಾನೆ. ಹಣ ಕೇಳಿದ ವೇಳೆ ಯುವತಿಗೆ ಮತ್ತು ಅವರ ಸ್ನೇಹಿತರಿಗೂ ಬೆದರಿಕೆ ನೀಡಿದ್ದಾನೆ.
ವಂಚನೆಯ ಹಿಂದೆ, ಮದುವೆ ಆಗಿದ್ದರೂ ಯುವತಿ ಜೊತೆ ಮದುವೆ ಆಸೆ ಆಮಿಷವೊಡ್ಡಿದ್ದುದಾಗಿ ವರದಿಯಾಗಿದೆ. ಯುವತಿ ದೂರು ದಾಖಲಿಸಿದ ನಂತರ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ಪ್ರಾರಂಭಿಸಿದ್ದಾರೆ. ಮೂವರನ್ನು ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ



