ಯುವ ಕಾಂಗ್ರೆಸ್‌ಗೆ ಪ್ರಬಲ ಲೀಡರ್‌ಶಿಪ್‌!

ಭಾರತದ ಸಂವಿಧಾನ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ನಿಟ್ಟಿನಲ್ಲಿ, ಯುವ ನಾಯಕರನ್ನು ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಭಾರತೀಯ ಯುವ ಕಾಂಗ್ರೆಸ್, “ರಾಷ್ಟ್ರೀಯ ಪದಾಧಿಕಾರಿಗಳ ನೂತನ ನಾಯಕತ್ವ ಅಭಿಯಾನ”ವನ್ನು ನೆಡೆಸಬೇಕೆಂದು ಘೋಷಿಸಿದೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ನಿಗಮ್ ಭಂಡಾರಿ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ ಬಾಹುಬಲಿ ಸುದ್ದಿಗೋಷ್ಠಿ ನಡೆಸಿದ್ರು. ಹಾಗೂ ರಾಷ್ಟ್ರೀಯ ಪದಾಧಿಕಾರಿಗಳ ನೂತನ ನಾಯಕತ್ವ ಅಭಿಯಾನದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ರು.

ಸಂವಿಧಾನದ ಮೌಲ್ಯಗಳನ್ನ ಅನುಸರಿಸುವ ಮತ್ತು ಎತ್ತಿ ಹಿಡಿಯುವ ಯುವ ನಾಯಕರನ್ನ ಸಿದ್ಧಪಡಿಸುವ ನಿಟ್ಟಿನಲ್ಲಿ, ಈ ಅಭಿಯಾನವನ್ನು ವಿನ್ಯಾಸಗೊಳಿಸಲಾಗಿದೆ. ಇದು ಕೇವಲ ಹುದ್ದೆಗಳ ಪರವಾಗಿ ನಡೆಯುವ ಸ್ಪರ್ಧೆಯಲ್ಲ. ಬದಲಾಗಿ ತರಬೇತಿ, ಕ್ಷೇತ್ರ, ಕಾರ್ಯ ಮತ್ತು ಮೌಲ್ಯಮಾಪನದ ಒಂದು ರಚನಾತ್ಮಕ ಪ್ರಕ್ರಿಯೆ. ರಾಹುಲ್ ಗಾಂಧಿಯವರು ಶ್ರಮಿಸುತ್ತಿರುವಂತೆಯೇ, ಬದ್ದ ಯುವ ಪಡೆಗಳನ್ನು ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ನಾಯಕರಿಗಿಂತ ಜನರ ನಡುವೆ ನಿಂತು ಹೋರಾಡುವ ನಾಯಕರ ಅಗತ್ಯವಿದೆ. ಈ ಅಭಿಯಾನ 8 ವರ್ಷಗಳ ದೀರ್ಘಾವಧಿಯ ಯೋಜನೆಯಾಗಿರಲಿದೆ. ಜನ ಸಮೂಹದ ನಾಯಕತ್ವ ಕುರಿತು ತರಬೇತಿಯನ್ನು ಕೊಡ ನೀಡಲಾಗುತ್ತದೆ. ಇದರ ಆಯ್ಕೆ ಪ್ರಕ್ರಿಯೆ, ಆನ್‌ಲೈನ್ ಅರ್ಜಿ ಸಲ್ಲಿಕೆ, ಕ್ಷೇತ್ರದಲ್ಲಿನ ಜವಾಬ್ದಾರಿಗಳ ನಿರ್ವಹಣೆಯನ್ನು ಒಳಗೊಂಡಿರುತ್ತದೆ. ಅಂತಿಮವಾಗಿ ತೇರ್ಗಡೆಯಾದವರನ್ನು ರಾಷ್ಟ್ರೀಯ ಸಂಸ್ಥೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ವಯಸ್ಸಿನ ಮಿತಿ 35 ವರ್ಷಕ್ಕಿಂತ ಕಡಿಮೆ ಇರಬೇಕು. ರಾಜಕೀಯದಲ್ಲಿ ಕನಿಷ್ಠ 3 ವರ್ಷ ಅನುಭವ ಇರಬೇಕು ಎಂಬ ನಿಯಮ ರೂಪಿಸಲಾಗಿದೆ.

About The Author