ಸೈಬರ್ ಕ್ರೈಂ ಕಾಟಕ್ಕೆ ಪೊಲೀಸ್ ಮೆಟ್ಟಿಲೇರಿದ ಯುವತಿ!

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ, ತನ್ನ ಪ್ರಿಯಕರನಿಗೆ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಳು. ಬಳಿಕ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಯುವತಿಗೆ ಕರೆ ಮಾಡಿದ ವ್ಯಕ್ತಿ, ಆಕೆಯ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾನೆ. ಅಲ್ಲದೆ, ₹1 ಲಕ್ಷ ಕೊಡದಿದ್ರೆ ಆ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಹೆದರಿಸಿದ್ದಾನೆ.

ಇದರಿಂದ ಕಂಗಾಲಾದ ಯುವತಿ, ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ ಬಗ್ಗೆ ಪ್ರಿಯಕರನ ಜತೆ ಚರ್ಚಿಸಿದ್ದಾಳೆ. ನಂತರ ಕರೆ ಮಾಡಿದ್ದ ವ್ಯಕ್ತಿಗೆ ಪ್ರಿಯಕರನಿಂದ ₹1 ಲಕ್ಷ ನಗದು ಕೊಡಿಸಿದ್ದಾಳೆ. ಆ ನಂತರವೂ ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ.

ಬಳಿ ಆ ಯುವತಿ ಕೇಂದ್ರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ತನ್ನ ಖಾಸಗಿ ಫೋಟೋಗಳು ಅಪರಿಚಿತ ವ್ಯಕ್ತಿಗೆ ಹೇಗೆ ಸಿಕ್ಕಿತೆಂದು ಆತಂಕಗೊಂಡ ಯುವತಿ, ಮೊದಲು ಪ್ರಿಯಕರನ ಮೇಲೆ ಅನುಮಾನ ಪಟ್ಟಿದ್ಲು. ಈ ನಿಟ್ಟಿನಲ್ಲಿ ತನಿಖೆ ಮಾಡಿದಾಗ ಆತನಿಂದ ಬಹಿರಂಗವಾಗಿಲ್ಲ ಎಂಬುದು ಗೊತ್ತಾಗಿದೆ. ಸದ್ಯ, ಅಪರಿಚಿತನಿಗಾಗಿ ಪೊಲೀಸರು ಹುಡುಕಾಡುತ್ತಿದ್ದು, ಫೋಟೋ ಲೀಕ್‌ ಬಗ್ಗೆ ಗಂಭೀರ ತನಿಖೆ ನಡೆಸ್ತಿದ್ದಾರೆ.

About The Author