ಫೋನ್‌ ಕಾಲ್‌‌ ಟ್ಯಾಪಿಂಗ್, ಸದನದಲ್ಲಿ ಭಾರೀ ಗದ್ದಲ!

ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಕಾನೂನು ಸಚಿವ ಎಚ್‌.ಕೆ. ಪಾಟೀಲ್ ನೀಡಿದ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಯಿತು. ತಮ್ಮ ಹೇಳಿಕೆಯಲ್ಲಿ ರಾಜ್ಯಪಾಲರಿಗೆ ಕೇಶವ ಕೃಪೆಯಿಂದ ಫೋನ್ ಬರುತ್ತೆ ಎಂದು ಹೇಳಿದ್ದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರ ಆಡಳಿತರೂಢ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಬಿರುಸಾದ ಚರ್ಚೆಗೆ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಸಲಹೆ ನೀಡಿದ್ದು, ರಾಜ್ಯಪಾಲರ ಕಚೇರಿಯ ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂಬುದನ್ನು ನೀವು ಪ್ರೂವ್ ಮಾಡಬೇಕು. ಹೀಗೆ ತತ್ತರಿಸುವ ಸರ್ಕಾರಗಳು ಹಿಂದೆ ಬಿದ್ದು ಹೋಗಿವೆ. HK ಪಾಟೀಲ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಅವರು ಮತ್ತಷ್ಟು ಗಂಭೀರವಾಗಿ ಕಾನೂನು ಸಚಿವರನ್ನು ಟಾರ್ಗೆಟ್ ಮಾಡಿದ್ದು, ಸಲ್ಲಿಸದಿದ್ದರೆ ದಾಖಲೆ ನೀಡಿ, ಅಲ್ಲವೇ ಪ್ರತಿಕ್ರಿಯೆಯನ್ನು ತೆಗೆಯಬೇಕು ಎಂದು ಕೋರಿದ್ದಾರೆ.

ರಾಜ್ಯದಲ್ಲಿ ಮತ್ತೆ ಫೋನ್‌ ಕದ್ದಾಲಿಕೆ ವಿಷ್ಯ ಮುನ್ನೆಲೆಗೆ ಬಂದಿದ್ದು, ರಾಜಭವನದ ಫೊನ್‌ ಕರೆಗಳನ್ನು, ರಾಜ್ಯ ಕಾಂಗ್ರೆಸ್‌ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ ಎಂದು, ಬಿಜೆಪಿ ಶಾಸಕ ಸುರೇಶ್ ಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ದೆಹಲಿಯಿಂದ ರಾಜ್ಯಪಾಲ ಗೆಹ್ಲೋಟ್‌ಗೆ ಕರೆ ಬಂದಿರುವುದಾಗಿ, ಕಾನೂನು ಸಚಿವ ಹೆಚ್‌.ಕೆ. ಪಾಟೀಲ್‌ ಹೇಳಿದ್ದಾರೆ.

ಹಾಗಿದ್ರೆ ರಾಜ್ಯ ಸರ್ಕಾರ ಫೋನ್‌ ಟ್ಯಾಪ್‌ ಮಾಡುತ್ತಿದೆಯಾ? ರಾಜ್ಯಪಾಲರಿಗೆ ಫೋನ್‌ ಬಂದಿರುವುದು ನಿಮಗೇಗೆ ಗೊತ್ತಾಗುತ್ತೆ ಎಂದು, ವಿಧಾನಸಭೆಯಲ್ಲಿ ಶಾಸಕ ಸುರೇಶ್ ಕುಮಾರ್‌ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರ ಯಾವುದೇ ಫೋನ್‌ ಟ್ಯಾಪ್‌ ಮಾಡುವುದಿಲ್ಲ. ವಿಪಕ್ಷ ನಾಯಕರ ಫೋನ್‌ ಟ್ಯಾಪ್‌ ಮಾಡಿಲ್ಲ ಎಂದು, ಸುರೇಶ್‌ ಕುಮಾರ್‌ ಆರೋಪವನ್ನು ತಳ್ಳಿ ಹಾಕಿದ್ರು.

ವರದಿ : ಲಾವಣ್ಯ ಅನಿಗೋಳ

About The Author