News: ಬೆಂಗಳೂರಿನಂಥ ಬೃಹತ್ ನಗರದಲ್ಲಿ ಕೆಲಸ ಅರಸಿ ಬರುವ ಹಲವರು ಸರಿಯಾಗಿ ಮನೆ ಮಾಡಿರುವುದಿಲ್ಲ. ಸೌಕರ್ಯ ಪಡೆದಿರುವುದಿಲ್ಲ. ಉತ್ತಮ ಸ್ಯಾಲರಿ ಇದ್ದರೂ, ಆಹಾರಕ್ಕಾಗಿ ಪರದಾಡುತ್ತಾರೆ. ಅಂಥವರಿಗಾಗಿಯೇ ಫುಡ್ ಆ್ಯಪ್‌ಗಳು ಬಂದಿದೆ. ಆ ಆ್ಯಪ್‌ನಲ್ಲಿ ಫುಡ್ ಆರ್ಡರ್ ಮಾಡಿದ್ರೆ ಸಾಕು, 10 ನಿಮಿಷದಲ್ಲಿ ಫುಡ್ ನಿಮ್ಮ ಬಾಗಿಲಿಗೇ ಬರುತ್ತದೆ. ಆದರೆ ಹಾಗೇ ಹತ್ತೇ ಹತ್ತು ನಿಮಿಷದಲ್ಲಿ ನಿಮ್ಮ ಮನೆ ಬಾಗಿಲಿಗೆ ಬರುವ ಫುಡ್ ಅದೆಷ್ಟು ಅಪಾಯಕಾರಿ ಅಂತಾ ನಿಮಗೆ ತಿಳಿದಿದೆಯಾ..?
ನಿನ್ನೆ ಇನ್‌ಸ್ಟಾಗ್ರಾಮ್‌ನಲ್ಲಿ ಓರ್ವ ಯುವಕ ವೀಡಿಯೋ ಅಪ್ಲೋಡ್ ಮಾಡಿದ್ದು, ಈ ವೀಡಿಯೋದಲ್ಲಿ ಫಾಸ್ಟ್ ಆಗಿ ಮನೆ ಬಾಗಿಲಿಗೆ ಬರುವ ಫುಡ್ ಬಗ್ಗೆ ಶಾಕಿಂಗ್ ಸತ್ಯ ಹೇಳಿದ್ದಾನೆ. ಈತ ಅಂಥ ಫುಡ್ ಸಪ್ಲೈ ಮಾಡುವಲ್ಲಿ ಕೆಲಸ ಮಾಡುತ್ತಿದ್ದರೂ, ಅದ್ಯಾವ ಧೈರ್ಯದಲ್ಲಿ ಈ ವೀಡಿಯೋ ಮಾಡಿದ್ದಾನೋ ಏನೋ.. ಆದರೆ ಸತ್ಯ ಹೇಳಿ, ಹಲವರ ಪ್ರಾಣ ಉಳಿಸಲಂತೂ ಕಾರಣನಾಗಿದ್ದಾನೆ.
ಈ ವೀಡಿಯೋದಲ್ಲಿ ಯುವಕ ಹೇಳಿದ್ದೇನೆಂದರೆ, ನಾನು ಇಂಥದ್ದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಮ್ಮ ಬಳಿ ಹೇಗೇ ಆಹಾರ 10 ನಿಮಿಷದಲ್ಲಿ ಬಂದು ತಲುಪುತ್ತದೆ ಅಂತಾ ನನಗೆ ಚೆನ್ನಾಗಿ ತಿಳಿದಿದೆ. ನೋಡಿ ನಿಮ್ಮ ಬಳಿ ಬರುವ ಅನ್ನವನ್ನು ಎಷ್ಟೋ ತಿಂಗಳ ಮುಂಚೆಯೇ ಬೇಯಿಸಿ, ಈ ರೀತಿ ಫ್ರೋಜನ್ ಮಾಡಿರುತ್ತಾರೆ. ವಿನಃ 10 ನಿಮಿಷದಲ್ಲಿ ಆಹಾರ ತಯಾರಾಗಿ ನಿಮ್ಮ ಬಳಿ ಬರುವುದಿಲ್ಲ.
ನೀವು ಸೇವಿಸುವ ಅನ್ನ, ಸಾಂಬಾರ್, ಸಮೋಸಾ, ಗ್ರೇವಿ, ಚಪಾತಿ, ಸಿಹಿ ತಿಂಡಿ ಎಲ್ಲ ಅಂದ್ರೆ ಎಲ್ಲವನ್ನೂ ರೆಡಿ ಮಾಡಿ, ಈ ರೀತಿ ತಂಪಿನ ಕೋಣೆಯಲ್ಲಿ ಹಾಕಿ, ಫ್ರೋಜನ್ ಮಾಡಿರುತ್ತಾರೆ. ನೀವು ಆರ್ಡರ್ ಮಾಡಿದ ತಕ್ಷಣ, ಅದನ್ನು ತಂದು ಮೈಕ್ರೋವೇವ್‌ನಲ್ಲಿ ಬಿಸಿ ಮಾಡಿ, ನಿಮಗೆ ನೀಡಲಾಗುತ್ತದೆ. ಹಾಗಾಗಿಯೇ ಈ ಆಹಾರ ನೀವು ಆರ್ಡರ್ ಮಾಡಿದ 10 ನಿಮಿಷದಲ್ಲೇ ನಿಮ್ಮ ಬಳಿ ಬಂದು ತಲುಪೋದು ಎಂದು ಹೇಳಿದ್ದಾನೆ ಈ ವ್ಯಕ್ತಿ.
ಅಲ್ಲದೇ ನಿಮಗೆ ಹಸಿವಾಗಿದ್ದಲ್ಲಿ, ಮನೆಯಲ್ಲೇ ಏನಾದರೂ ಮಾಡಿ ತಿನ್ನಿ. ಹಣ್ಣು-ತರಕಾರಿ ತಿನ್ನಿ. ಆಗದಿದ್ದಲ್ಲಿ, ನೀವು ನಿಮ್ಮ ಅಕ್ಕಪಕ್ಕದಲೇ ಇರುವ ಹೋಟೇಲ್‌ಗೆ ಹೋಗಿ, ನಿಮ್ಮೆದುರೇ ರೆಡಿ ಮಾಡಿದ ಆಹಾರ ಸೇವಿಸಿ. ಇದಕ್ಕಿಂತ ನೀವು ಬೀದಿ ಬದಿ ನಿಮ್ಮ ಎದುರು ಮಾಡುವ ಆಹಾರ ಸೇವಿಸುವುದು ಎಷ್ಟೋ ಉತ್ತಮ. ಆದರೆ ಆರ್ಡರ್ ಮಾಡಿ ಆಹಾರ ಸೇವಿಸಲೇಬೇಡಿ ಎಂದು ಆತ ಕಿವಿ ಮಾತು ಹೇಳಿದ್ದಾನೆ.
ಆ ವ್ಯಕ್ತಿಯ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.




