2026 ರ ಕೇಂದ್ರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ತಮ್ಮ ಬಜೆಟ್ ಭಾಷಣದ ಸಮಯದಲ್ಲಿ, ಸರ್ಕಾರವು ಸ್ವಾವಲಂಬಿ ಭಾರತಕ್ಕಾಗಿ ತನ್ನ ಖಜಾನೆಯನ್ನು ತೆರೆದಿದೆ. ಹಣಕಾಸು ಸಚಿವರು ಐದು ವರ್ಷಗಳಲ್ಲಿ 20 ಹೊಸ ಜಲಮಾರ್ಗಗಳನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ವಾರಾಣಸಿ ಮತ್ತು ಪಾಟ್ನಾದಲ್ಲಿ ಹಡಗು ದುರಸ್ತಿ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ಸೀಪ್ಲೇನ್ VGF ಯೋಜನೆಯನ್ನು ಪ್ರಾರಂಭಿಸಲಾಗುವುದು.
25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಪ್ರತಿ ಜಿಲ್ಲೆಯಲ್ಲೂ ಮಹಿಳಾ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಪ್ರವಾಸೋದ್ಯಮ ಉತ್ತೇಜಿಸಲು 10 ಸಾವಿರ ಗೈಡ್ಗಳಿಗೆ ತರಬೇತಿ ಕೇಂದ್ರ ಸ್ಥಾಪನೆ, 20 ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಗೈಡ್ಗಳಿಗೆ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
15 ಸಾವಿರ ಶಾಲೆಗಳಲ್ಲಿ ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಸ್ಥಾಪನೆಯಾಗಲಿದೆ. ಆ ಮೂಲಕ ಸೋಷಿಯಲ್ ಮೀಡಿಯಾ ಮೂಲಕ ಉದ್ಯೋಗ ಕಂಡು ಕೊಳ್ಳುವವರಿಗೆ ಉತ್ತೇಜನ ನೀಡತ್ತೆ. ನರೇಗಾ ಹೆಸರು ಬದಲಾಯಿಸಿ ಜಿ ರಾಮ ಜೀ ಎಂದು ಬದಲಾಯಿಸುವ ನಿರ್ಧಾರ ನಡುವೆಯ ಕೇಂದ್ರ ಸರ್ಕಾರ ಖಾದಿ ಉದ್ಯಮಕ್ಕೆ ಒತ್ತು ನೀಡಲು ನಿರ್ಧರಿಸಿದ್ದು, ಮಹಾತ್ಮ ಗಾಂಧಿ ಹೆಸರು ಯೋಜನೆಯನ್ನು ಘೋಷಿಸಿದೆ.
ಒಡಿಶಾ, ಕೇರಳ, ತಮಿಳುನಾಡಿನಲ್ಲಿ ಆಂಧ್ರದಲ್ಲಿ ರೇರ್ ಅರ್ಥ್ ಕಾರಿಡಾರ್ ಮತ್ತು ಸೆಮಿಕಂಡಕ್ಟರ್ ಯೋಜನೆಗಾಗಿ 40 ಸಾವಿರ ಕೋಟಿ ಅನ್ನು ಸರಕಾರ ಘೋಷಿಸಿದೆ. ಇನ್ನು ಭಾರತದ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು ಜನವರಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ 6.2 ರಷ್ಟು ಹೆಚ್ಚಾಗಿ 1.93 ಲಕ್ಷ ಕೋಟಿ ರೂ.ಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ




