ಇದೇ ಅವಧಿಗೆ ಡಿಕೆಶಿ ಸಿಎಂ ಆಗ್ತಾರಾ?

ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲೇಬೇಕು ಮತ್ತು ಆಗ್ತಾರೆ ಎಂಬ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮಂಡ್ಯದಲ್ಲಿ ಶಾಸಕ ಗಣಿಗ ರವಿಕುಮಾರ್ ಹೇಳಿದ್ದಾರೆ. ಇನ್ನು, ಶಾಸಕರ ಫಾರಿನ್‌ ಟೂರ್‌ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. 4 ಜನ ಎಂಎಲ್ಎಗಳು ಟ್ರಿಪ್ ಅಥವಾ ರೆಸಾರ್ಟ್‌ಗೆ ಹೋಗಿ ಕೂತು ಊಟ ಮಾಡಿದರೆ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಅದೇ ರೀತಿ ವಿದೇಶದಿಂದ ವಾಪಸ್ ಬಂದು ಯಾರನ್ನಾದರೂ ಮುಖ್ಯಮಂತ್ರಿಯಾಗಿ ಉಳಿಸೋದು ಅಥವಾ ಬದಲಾವಣೆ ಮಾಡೋದು ಸಾಧ್ಯವಿಲ್ಲ ಎಂದು ಗಣಿಗ ರವಿಕುಮಾರ್ ಟಾಂಗ್‌ ಕೊಟ್ಟಿದ್ದಾರೆ.

About The Author