ಸಿನಿಮಾ ತಾರೆಯರ ವಿಷಯದಲ್ಲಿ ಆಗಾಗ ಒಂದಷ್ಟು ಸುದ್ದಿಗಳು ಹರಿದಾಡುವುದು ಸಹಜ. ಅದೆಷ್ಟು ಸರಿನೋ, ತಪ್ಪೋ ಗೊತ್ತಿಲ್ಲ. ಆದರೆ, ಕೆಲವು ಸುದ್ದಿಗಳು ಆಗಾಗ ಹರಿದಾಡುವುದು ನಿಜ. ಇಲ್ಲೀಗ ಹೇಳಹೊರಟ ವಿಷಯ, ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದ್ವೆ ಸಮಾಚಾರ. ಹೌದು, ಇವರಿಬ್ಬರು ಗೀತಾ ಗೋವಿಂದಂ ಸಿನಿಮಾದಲ್ಲಿ ಕಾಣಿಸಿಕೊಂಡರು. ಯಾವಾಗ ಈ ಸಿನಿಮಾ ಹೊರಬಂತೋ, ಅಲ್ಲಿಂದ ಇಬ್ಬರ ನಡುವೆ ಸ್ನೇಹ ಬೆಳೆಯಿತು. ಅದು ಗಟ್ಟಿಯಾಯ್ತು. ಅಲ್ಲಿಂದ ಪ್ರೀತಿಯೂ ಚಿಗುರಿತು. ಅದು ಮದ್ವೆ ವಿಷಯದವರೆಗೂ ಬಂತು. ಈಗ ಮದ್ವೆ ಆಗೋವರೆಗೂ ಬಂದಿದೆ.
ಯೆಸ್, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇವರ ಮದ್ವೆ ಸುದ್ದಿ ಎಲ್ಲೆಡೆ ಹರಿದಾಡುತ್ತಿರೋದು ನಿಜ. ಅವರ ಮದ್ವೆ ಅಲ್ಲಂತೆ, ಇಲ್ಲಂತೆ, ಹಾಗಂತೆ, ಹೀಗಂತೆ ಅನ್ನುವ ಸುದ್ದಿಯೇ ಇತ್ತು. ಆದರೆ, ಎಲ್ಲೂ ಕೂಡ ರಶ್ಮಿಕಾ ಆಗಲಿ, ವಿಜಯ್ ದೇವರಕೊಂಡ ಅವರಾಗಲಿ ಸ್ಪಷ್ಟನೆ ಕೊಟ್ಟಿಲ್ಲ. ಈಗ ಹೊಸ ಸುದ್ದಿ ಅಂದ್ರೆ, ಅವರಿಬ್ಬರ ಮದ್ವೆ ಡೇಟ್ ಫಿಕ್ಸ್ ಆಗಿರುವ ಆಮಂತ್ರಣ ಪತ್ರವೊಂದು ವೈರಲ್ ಆಗಿರೋದು. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುದ್ದಿ ಅಲ್ಲಿಗೆ ಅಧಿಕೃತವಾದಂತಾಗಿದೆ. ಅವರ ವಿವಾಹ ಆಮಂತ್ರಣ ಪತ್ರ ಸದ್ಯ ವೈರಲ್ ಆಗಿದ್ದು, ಆ ಮದ್ವೆ ಪತ್ರದಲ್ಲಿ ಫೆಬ್ರವರಿ 26 ರಂದು ಮದುವೆ ನಡೆಯಲಿದ್ದು, ಹೈದರಾಬಾದ್‌ನಲ್ಲಿ ಮಾರ್ಚ್ 4 ರಂದು ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ. ವೈರಲ್ ಆಗಿರುವ ಆ ಮದ್ವೆ ಪತ್ರ ನೋಡಿರುವ ಅವರಿಬ್ಬರ ಫ್ಯಾನ್ಸ್ ಸಖತ್ ಖುಷಿಯಲ್ಲಿರೋದಂತೂ ಸುಳ್ಳಲ್ಲ.
ಅದೇನೆ ಇರಲಿ, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆಗುತ್ತಿರುವುದು ಅಧಿಕೃತವಾಗಿದೆ. ಅತಿಥಿಗಳಿಗೆ ನೀಡಲಾದ ಅವರ ವಿವಾಹ ಪತ್ರ ವೈರಲ್ ಆಗಿದೆ. ಫೆಬ್ರವರಿ 26ಕ್ಕೆ ಮದ್ವೆ ನಡೆಯಲಿದೆ. ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ವಿವಾಹವಾಗಲಿದ್ದಾರೆ. ಸದ್ಯ ವಿಜಯ್ ಮತ್ತು ರಶ್ಮಿಕಾ ಮದುವೆಗೆ ಅತಿಥಿಗಳನ್ನು ಆಹ್ವಾನಿಸುತ್ತಿದ್ದಾರೆ. ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರವನ್ನು ವೈರಲ್ ಮಾಡಿದ್ದಾರೆ. ವಿವಾಹ ಆಮಂತ್ರಣ ಬಾಕ್ಸ್ ಅಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಎಂದು ಬರೆದಿದೆ. ಆಮಂತ್ರಣ ಪತ್ರದಲ್ಲಿ ಫೆಬ್ರವರಿ 26ರಂದು ಮದ್ವೆ ನಡೆಯಲಿದೆ ಎಂದು ಬರೆಯಲಾಗಿದೆ. ಇನ್ನು ಹೈದರಾಬಾದ್ನಲ್ಲಿರುವ ವಿಜಯ್ ಅವರ ಗೆಳೆಯರು, ಅಭಿಮಾನಿಗಳಿಗಾಗಿ ಮಾರ್ಚ್ 4ರಂದು ಹೈದರಾಬಾದ್ನ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಕೆಲ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಅವರಿಬ್ಬರ ಓಡಾಟ ಕಂಡು ಮದ್ವೆ ಆಗುತ್ತಾರೆ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಅದೀಗ ನಿಜವಾಗಿದೆ. ಈ ಹಿಂದೆ ಕೂಡ ಅವರಿಬ್ಬರ ನಿಶ್ಚಿತಾರ್ಥ ಕೂಡ ಆಗಿದೆ ಎನ್ನಲಾಗಿತ್ತು. ಆದರೆ, ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ಅಧಿಕೃತ ಘೋಷಣೆ ಬಂದಿರಲಿಲ್ಲ. ಈಗ ಅವರ ಆಮಂತ್ರಣ ಪತ್ರದಿಂದ ಎಲ್ಲವೂ ಅಧಿಕೃತವಾಗಿದೆ. ಕೆಲವೊಮ್ಮೆ ಅಂತೆ-ಕಂತೆಗಳ ಸುದ್ದಿಗಳೇ ಹೆಚ್ಚು. ಆದರೂ, ಇದು ಅಧಿಕೃತ ಎನ್ನಲಾಗುತ್ತಿದೆ. ಇಷ್ಟಕ್ಕೂ ಫೆ.26ಬರುತ್ತೆ. ಅಂದು ಅವರಿಬ್ಬರ ಮದ್ವೆ ನಡೆಯುತ್ತೆ ಅನ್ನೋದು ಖಾತ್ರಿಯಾದಂತಿದೆ.




