ತನ್ನ ಬೋಲ್ಡ್ ಬಿಹೇವಿಯರ್ನಿಂದಲೇ ಸುದ್ದಿ ಮಾಡೋ ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಶಿವಸೇನೆ ಮುಖಂಡನ ವಿರುದ್ಧ ಕಿಡಿಕಾರಿದ್ದಾರೆ. ನನಗೆ ಜೀವ ಬೆದರಿಕೆ ಹಾಕಲಾಗಿದೆ ಅಂತಾ ಬಾಲಿವುಡ್ ಕ್ವೀನ್ ಕಂಗನಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಶಿವಸೇನೆ ಮುಖಂಡ ಸಂಜಯ್ ರಾವತ್ ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಮುಂಬೈಗೆ ವಾಪಸ್ಸಾದ್ರೆ ನಿನ್ನ ಜೀವಕ್ಕೆ ಸಂಚಕಾರ ಅಂತಾ ಆವಾಜ್ ಹಾಕಿದ್ದಾರೆ.ಇಂತಹ ಬೆದರಿಕೆಗಳನ್ನ ಕಂಡ ಮೇಲೆ ನನಗೆ ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗ್ತಿದೆ ಅಂತಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನುಕಂಗನಾ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿರೋ ಶಿವಸೇನೆ ಮುಖಂಡ ಸಂಜಯ್ ರಾವತ್.. ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. ನಟಿ ಕಂಗನಾ ಮುಂಬೈ ಪೊಲೀಸರನ್ನ ಅವಹೇಳನ ಮಾಡಿದ್ದಾರೆ. ಅವರು ದಯಮಾಡಿ ನಮ್ಮ ಮುಂಬೈಗೆ ಬರೋದು ಬೇಡ. ಅಲ್ಲದೇ ಮುಂಬೈ ಪೊಲೀಸರನ್ನ ಟೀಕಿಸಿರೋ ಕಂಗನಾ ವಿರುದ್ಧ ಗೃಹ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ಮಾಫಿಯಾ ಬಗ್ಗೆ ಬೆಳಕು ಚೆಲ್ಲಿದ್ದ ನಟಿ ಕಂಗನಾ ರಣಾವತ್ ಅನೇಕ ಬಾಲಿವುಡ್ ದಿಗ್ಗಜರ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು.