ಹೊಸ ಆನ್‌ಲೈನ್ ಗೇಮಿಂಗ್ ಕಾಯ್ದೆ ಜಾರಿ: ಏನಿದು ಹೊಸ ನಿಯಮಗಳು?

ದೇಶದಲ್ಲಿ ಆನ್‌ಲೈನ್ ಗೇಮಿಂಗ್ ಚಟುವಟಿಕೆಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ “ಆನ್‌ಲೈನ್ ಗೇಮಿಂಗ್‌ನ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025” ಅನ್ನು ಇಂದಿನಿಂದ (ಮೇ 1) ಜಾರಿಗೆ ತಂದಿದೆ. ಯುವಜನತೆ ಹಾಗೂ ಅಪ್ರಾಪ್ತರು ಗೇಮಿಂಗ್‌ನಲ್ಲಿ ಹಣ ಕಳೆದುಕೊಳ್ಳುವುದು, ಸಾಲದ ಬಲೆಗೆ ಬೀಳುವುದು ಮತ್ತು ಕೆಲ ಪ್ರಕರಣಗಳಲ್ಲಿ ಆತ್ಮಹತ್ಯೆಗೂ ಕಾರಣವಾಗಿರುವ ಹಿನ್ನೆಲೆ ಈ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಹೊಸ ಕಾಯ್ದೆಯಡಿ ಆನ್‌ಲೈನ್ ಗೇಮ್‌ಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಮೊದಲನೆಯದಾಗಿ ಇ-ಸ್ಪೋರ್ಟ್ಸ್-ಸಂಪೂರ್ಣ ಕಾನೂನುಬದ್ಧ, ಸ್ಕಿಲ್ ಗೇಮ್ಸ್-ಲೈಸೆನ್ಸ್ ಕಡ್ಡಾಯ, ಬೆಟ್ಟಿಂಗ್ ಗೇಮ್ಸ್-ಸಂಪೂರ್ಣ ನಿಷೇಧ ಮಾಡಲಾಗಿದೆ. ಆನ್‌ಲೈನ್ ಕ್ಯಾಸಿನೊ ಹಾಗೂ ಬೆಟ್ಟಿಂಗ್ ಆಪ್‌ಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದ್ದು, ಲೈಸೆನ್ಸ್ ಅನ್ನು ಕಡ್ಡಾಯಮಾಡಲಾಗಿದೆ. ಎಲ್ಲಾ ಆನ್‌ಲೈನ್ ಗೇಮಿಂಗ್ ಕಂಪನಿಗಳು ನ್ಯಾಷನಲ್ ಗೇಮಿಂಗ್ ಅಥಾರಿಟಿ (NGA) ಮೂಲಕ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. Dream11, MPL, WinZO ಸೇರಿದಂತೆ ಪ್ರಮುಖ ಕಂಪನಿಗಳು ಹೊಸ ಅನುಮತಿ ಪಡೆಯಬೇಕಾಗಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನಕ್ಕೆ ಗರಿಷ್ಠ 3 ಗಂಟೆ ಮಾತ್ರ ಅವಕಾಶ, ರಾತ್ರಿ 11 ರಿಂದ ಬೆಳಿಗ್ಗೆ 6ರ ವರೆಗೆ ಆನ್‌ಲೈನ್ ಗೇಮಿಂಗ್ ಸಂಪೂರ್ಣ ನಿಷೇಧ ಮಾಡಲಾಗಿದೆ. ಮಕ್ಕಳಿಗೆ ಹಣ ಖರ್ಚು ಮಿತಿ ಹಾಗೂ ಪೋಷಕರ OTP ಕಡ್ಡಾಯ, ತಿಂಗಳಿಗೆ ಗರಿಷ್ಠ ₹10,000 ಮಿತಿ, ಹಣಕಾಸು ಮತ್ತು ತೆರಿಗೆ ನಿಯಮಗಳು, ಗೇಮಿಂಗ್ ಗೆಲುವಿನ ಮೇಲೆ 28% GST ಮುಂದುವರೆಯಲಿದೆ ₹10,000ಕ್ಕಿಂತ ಹೆಚ್ಚಿನ ಗೆಲುವಿಗೆ 30% TDS ಕಡಿತ ಹಾಗೂ ಎಲ್ಲಾ ಹಣಕಾಸು ವ್ಯವಹಾರಗಳಿಗೆ ಆಧಾರ್ KYC ಕಡ್ಡಾಯ.

ನಿಯಮ ಉಲ್ಲಂಘಿಸಿದರೆ ದಂಡ ಕಡ್ಡಾಯ ಕಂಪನಿಗಳಿಗೆ ಮೊದಲ ಬಾರಿ ₹1 ಕೋಟಿ ದಂಡ. ಮರುಉಲ್ಲಂಘನೆಗೆ ₹5 ಕೋಟಿ ದಂಡ ಮತ್ತು CEOಗೆ 3 ವರ್ಷ ಜೈಲು. ನಿಷೇಧಿತ ಗೇಮ್‌ಗಳ ಜಾಹೀರಾತು ಮಾಡಿದರೆ ₹50 ಲಕ್ಷ ದಂಡ ಮತ್ತು 1 ವರ್ಷ ಬ್ಯಾನ್. ಬಳಕೆದಾರರು ನಿಷೇಧಿತ ಗೇಮ್ ಆಡಿದರೆ ₹10,000 ದಂಡ ಮತ್ತು ಕಠಿಣ ಕಾನೂನು ಕ್ರಮ ತಗೆದುಕೊಳ್ಳಲಾಗುವುದು. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 200ಕ್ಕೂ ಹೆಚ್ಚು ಗೇಮಿಂಗ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸ ನಿಯಮಗಳ ಹಿನ್ನೆಲೆಯಲ್ಲಿ ಮೇ 1ರೊಳಗೆ ಲೈಸೆನ್ಸ್ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

VPN ಬಳಸಿ ನಿಷೇಧಿತ ಗೇಮ್ ಆಡಿದರೂ ಸೈಬರ್ ಕ್ರೈಂ ಪೊಲೀಸರು ಟ್ರ್ಯಾಕ್ ಮಾಡುವ ವ್ಯವಸ್ಥೆ ಜಾರಿಗೆ ಬಂದಿದೆ. ಎಲ್ಲಾ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಿಗೆ ನೋಂದಣಿ ಮತ್ತು ಡಿಜಿಟಲ್ ಪ್ರಮಾಣಪತ್ರ ಕಡ್ಡಾಯವಾಗಿದೆ.

ದೂರು ಪರಿಹಾರ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಯಾವುದೇ ದೂರುಗಳಿದ್ದರೂ ಬಳಕೆದಾರರು ಮೊದಲು ಕಂಪನಿಗೆ ದೂರು ನೀಡಬೇಕು. ಅಲ್ಲಿ ಪರಿಹಾರ ಸಿಗದಿದ್ದರೆ ಪ್ರಾಧಿಕಾರ ಮತ್ತು MeitY ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. ದೂರುಗಳನ್ನು 30 ದಿನಗಳಲ್ಲಿ ಪರಿಹರಿಸುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ಹೊಸ ಕಾಯ್ದೆ ಆನ್‌ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಯುವಜನರ ರಕ್ಷಣೆ ಹಾಗೂ ಹಣಕಾಸು ಶಿಸ್ತು ಕಾಪಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.

About The Author