ನನ್ನ ಹಾಗೂ ಪ್ರಧಾನಿ ಮೋದಿ ನಡುವೆ ಸಂಬಂಧ ಚೆನ್ನಾಗಿದ್ದು ಇಂಡಿಯನ್ ಅಮೆರಿಕನ್ನರ ಮತ ನನಗೆ ಸಿಗಲಿದೆ ಅಂತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಒಬ್ಬ ಪ್ರಭಾವಶಾಲಿ ವ್ಯಕ್ತಿ. ಅಲ್ಲದೇ ನನ್ನ ಹಾಗೂ ಮೋದಿ ಸ್ನೇಹ ತುಂಬಾ ಚೆನ್ನಾಗಿದೆ. ಈ ಸ್ನೇಹ ಸಂಬಂಧದಿಂದ ನನಗೆ ಅಮೆರಿಕದಲ್ಲಿರುವ ಇಂಡಿಯನ್ನರ ಮತ ನನಗೆ ಸಿಗಲಿದೆ ಅಂತಾ ಹೇಳಿದ್ರು. ಅಲ್ಲದೇ ಹೌಡಿ ಮೋದಿ ಕಾರ್ಯಕ್ರಮವನ್ನೂ ಇದೇ ವೇಳೆ ನೆನಪಿಸಿಕೊಂಡರು.

ಇನ್ನು ಈ ಸಂಬಂಧ ಮಾಸನ್ ಇನ್ ಬ್ಯಾಟಲ್ಗ್ರೌಂಡ್ ಸಮೀಕ್ಷೆ ನಡೆಸಿದ್ದು ಇದರನ್ವಯ ಮೋದಿ ಜೊತೆಗಿನ ಟ್ರಂಪ್ ಸ್ನೇಹ ಟ್ರಂಪ್ಗೆ ವರದಾನವಾಗಿದೆ ಅಂತಾ ಹೇಳಲಾಗಿದೆ. ಈ ಹಿಂದೆ ಡೆಮಾಕ್ರೆಟಿಕ್ಸ್ಗೆ ಮತಚಲಾಯಿಸುತ್ತಿದ್ದ ಇಂಡಿಯನ್ ಅಮೆರಿಕನ್ನರು ಮೋದಿ – ಟ್ರಂಪ್ ಸ್ನೇಹ ಕಂಡು ರಿಪಬ್ಲಿಕನ್ ಪಕ್ಷಕ್ಕೇ ತಮ್ಮ ವೋಟ್ ಒತ್ತುತ್ತಿದ್ದಾರಂತೆ. ಹಾಗೂ ಜೋ ಬಿಡೆನ್ ಪ್ರತಿನಿಧಿಯಾಗಿ ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರಿಸ್ರನ್ನ ಆಯ್ಕೆ ಮಾಡಿರೋದೂ ಸಹ ಇಂಡಿಯನ್ ಅಮೆರಿಕರನ್ನರ ಮತಗಳನ್ನ ಆಕರ್ಷಿಸಲು ಅಂತಾ ಹೇಳಲಾಗ್ತಿದೆ. ಅಲ್ಲದೇ ಪ್ರಧಾನಿ ಮೋದಿ ಸಹ ಟ್ರಂಪ್ ದಂಪತಿಯನ್ನ ಭಾರತಕ್ಕೆ ಕರೆಸಿ ವಿಶೇಷ ಆತಿಥ್ಯ ನೀಡಿದ್ದನ್ನ ನಾವಿಲ್ಲಿ ಸ್ಮರಿಸಬಹುದು.

ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.