RBI ಹೊಸ ರೂಲ್ಸ್ – ಅಕ್ಟೋಬರ್ 1ರಿಂದ ಎಫ್‌ಡಿ ನಿಯಮಗಳಲ್ಲಿ ಭಾರಿ ಬದಲಾವಣೆ!

ಬ್ಯಾಂಕ್‌ಗಳಲ್ಲಿ ಫಿಕ್ಸ್ಡ್ ಡೆಪಾಸಿಟ್ (FD) ಮಾಡುವ ಗ್ರಾಹಕರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮಹತ್ವದ ಹಾಗೂ ಹೊಸ ನಿಯಮವೊಂದನ್ನು ತಂದಿದೆ. ಈ ಹೊಸ ರೂಲ್ಸ್ ಅಕ್ಟೋಬರ್ 1, 2026ರಿಂದ ದೇಶಾದ್ಯಂತ ಕಡ್ಡಾಯವಾಗಿ ಜಾರಿಗೆ ಬರಲಿದೆ. ಹಾಗಾದರೆ ಈ ಹೊಸ ನಿಯಮಗಳ ಸಂಪೂರ್ಣ ವಿವರಗಳು ಇಲ್ಲಿವೆ.

ಆರ್‌ಬಿಐ ಜುಲೈ 30ರಂದೇ ‘RBI Interest Rate on Deposits Second Amendment Directions 2026’ ಎನ್ನುವ ಅಧಿಕೃತ ಆದೇಶವನ್ನು ಹೊರಡಿಸಿದೆ. ಇದು ಮುಖ್ಯವಾಗಿ ‘ಬಲ್ಕ್ ಡೆಪಾಸಿಟ್’ (Bulk Deposit) ಗಳಿಗೆ ಅನ್ವಯಿಸುತ್ತದೆ. 3 ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದೇ ಬಾರಿಗೆ ಬ್ಯಾಂಕಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಮಾಡುವುದನ್ನು ಬಲ್ಕ್ ಡೆಪಾಸಿಟ್ ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ದೊಡ್ಡ ದೊಡ್ಡ ಕಂಪನಿಗಳು, ಬ್ಯುಸಿನೆಸ್ ಮ್ಯಾನ್‌ಗಳು, ಟ್ರಸ್ಟ್‌ಗಳು ಮತ್ತು ಶ್ರೀಮಂತ ವ್ಯಕ್ತಿಗಳು ಮಾಡುತ್ತಾರೆ.

ಈ ಹೊಸ ನಿಯಮವು ಕೇವಲ ವಾಣಿಜ್ಯ ಬ್ಯಾಂಕ್‌ಗಳಿಗೆ ಮಾತ್ರವಲ್ಲದೆ, ಸ್ಮಾಲ್ ಫೈನಾನ್ಸ್ ಬ್ಯಾಂಕ್, ರೀಜನಲ್ ರೂರಲ್ ಬ್ಯಾಂಕ್, ಪೇಮೆಂಟ್ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್‌ಗಳಿಗೂ ಅನ್ವಯಿಸುತ್ತದೆ. ಅಕ್ಟೋಬರ್ 1ರಿಂದ ಜಾರಿಗೆ ಬರುವ ಎರಡು ಪ್ರಮುಖ ಅಂಶಗಳೆಂದರೆ; ಮೊದಲನೆಯದಾಗಿ, ಬ್ಯಾಂಕ್‌ಗಳು ಪ್ರತಿದಿನ ಬೆಳಿಗ್ಗೆ 10:10 ಗಂಟೆಗೆ ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ಬಲ್ಕ್ ಡೆಪಾಸಿಟ್ ಬಡ್ಡಿ ದರವನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ವೆಬ್‌ಸೈಟ್‌ನಲ್ಲಿ ನಮೂದಿಸಿದ ದರವನ್ನೇ ಗ್ರಾಹಕರಿಗೆ ನೀಡಬೇಕು.

ಎರಡನೆಯದಾಗಿ, ಎಲ್ಲರಿಗೂ ಒಂದೇ ಬಡ್ಡಿ ದರ ಅನ್ವಯವಾಗಲಿದೆ. ಇಲ್ಲಿಯವರೆಗೆ ಪ್ರಭಾವಿ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಬಡ್ಡಿ ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಆ ರೀತಿ ಪ್ರತ್ಯೇಕ ಮಾತುಕತೆಗೆ ಅವಕಾಶವಿರುವುದಿಲ್ಲ. ಒಂದೇ ದಿನ ಮತ್ತು ಒಂದೇ ಮೊತ್ತದ ಡೆಪಾಸಿಟ್‌ಗೆ ಎಲ್ಲಾ ಗ್ರಾಹಕರಿಗೂ ಒಂದೇ ಸಮಾನವಾದ ಬಡ್ಡಿದರ ಸಿಗಲಿದ್ದು, ಯಾವುದೇ ತಾರತಮ್ಯ ಮಾಡುವಂತಿಲ್ಲ.

ಬ್ಯಾಂಕ್‌ಗಳಿಗೆ ಎಲ್‌ಸಿಆರ್ (LCR) ಆಧಾರದ ಮೇಲೆ ಬಡ್ಡಿ ದರದಲ್ಲಿ ಸ್ವಲ್ಪ ವ್ಯತ್ಯಾಸ ಮಾಡಲು ಅವಕಾಶ ನೀಡಲಾಗಿದ್ದರೂ, ಒಂದೇ ವರ್ಗದ ಗ್ರಾಹಕರ ಮಧ್ಯೆ ತಾರತಮ್ಯ ಇರಬಾರದು ಎಂಬುದು ಆರ್‌ಬಿಐ ನಿಯಮವಾಗಿದೆ. ಈ ನಿಯಮವು ಕೇವಲ 3 ಕೋಟಿ ರೂಪಾಯಿ ಮೇಲ್ಪಟ್ಟ ಬಲ್ಕ್ ಡೆಪಾಸಿಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂಬುದನ್ನು ಗ್ರಾಹಕರು ಗಮನಿಸಬೇಕು.

About The Author