ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣ ಸೆಲ್ನಲ್ಲಿ ಮೊಬೈಲ್ ಪತ್ತೆಯಾಗಿರುವ ಪ್ರಕರಣ ಈಗ ದೊಡ್ಡ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡಗೂ ಕೂಡ ಇದರ ಬಿಸಿ ತಟ್ಟಿದ್ದು, ಅಧಿಕಾರಿಗಳು ಕಠಿಣ ಕ್ರಮಗಳಿಗೆ ಮುಂದಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆ ಕಂಪ್ಲೀಟ್ ಡಿಟೇಲ್ಸ್ ಏನು ಅಂತ ಈಗ ನೋಡೋಣ!
ಹೌದು, ಕೈದಿಗಳ ಪಾಲಿಗೆ ಸೆರೆಮನೆಯಾಗಬೇಕಿದ್ದ ಪರಪ್ಪನ ಅಗ್ರಹಾರ ಜೈಲು ಐಷರಾಮಿ ಅರಮನೆಯಾಗಿದ್ಯಾ ಎಂಬ ಗಂಭೀರ ಚರ್ಚೆ ಈಗ ರಾಜ್ಯದಲ್ಲಿ ಜೋರಾಗಿದೆ. ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಕಾರಾಗೃಹ ಇಲಾಖೆ ಡಿಜಿಪಿ ‘ಅಲೋಕ್ ಕುಮಾರ್’ ಅವರು ಫುಲ್ ಅಲರ್ಟ್ ಆಗಿದ್ದಾರೆ. ಜೈಲಿಗೆ ದಿಢೀರ್ ಭೇಟಿ ನೀಡಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸಿದ ಬಳಿಕ, ಭದ್ರತೆಯನ್ನು ಮತ್ತಷ್ಟು ಬಿಗಿ ಮಾಡಲಾಗಿದೆ.
ಪ್ರಜ್ವಲ್ ಮಾಡಿದ ಈ ಹುಳುಕಿನಿಂದಾಗಿ ಈಗ ಅದೇ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಪವಿತ್ರಾ ಗೌಡಗೂ ಸಂಕಷ್ಟ ಎದುರಾಗಿದೆ ಅಂಥ ಹೇಳಲಾಗ್ತಿದೆ! ಹೌದು ‘ಜೈಲು ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಪವಿತ್ರಾ ಗೌಡ ಅವರ ಬ್ಯಾರಕ್ ಅನ್ನು ಸಹ ಬದಲಾವಣೆ ಮಾಡಿದ್ದಾರೆ.
ಇಷ್ಟು ದಿನಗಳ ಕಾಲ ಪವಿತ್ರಾ ಗೌಡ ಅವರು ಇಬ್ಬರು ಕೈದಿಗಳಿದ್ದ ಸಣ್ಣ ಬ್ಯಾರಕ್ನಲ್ಲಿ ವಾಸವಿದ್ದರು. ಆದರೆ ಈಗ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಅವರನ್ನು ಹೆಚ್ಚಿನ ಕೈದಿಗಳಿರುವ ಮತ್ತೊಂದು ಕೊಠಡಿಗೆ ಶಿಫ್ಟ್ ಮಾಡಿದ್ದಾರೆ.
ಮತ್ತೊಂದೆಡೆ ನಟ ದರ್ಶನ್ ಅವರ ಬ್ಯಾರಕ್ ಬಳಿಯೂ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ದರ್ಶನ್ ಇರುವ ಜಾಗದ ಸುತ್ತಲೂ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿ ಚಟುವಟಿಕೆಯ ಮೇಲೆ ಸಿಸಿಟಿವಿ ಕ್ಯಾಮೆರಾಗಳ ಮೂಲಕ ತೀವ್ರ ನಿಗಾ ಇರಿಸಲಾಗಿದೆ ಎನ್ನುವ ಅಂಶ ಮಾಧ್ಯಮಗಳ ಮೂಲಕ ತಿಳಿದುಬಂದಿದೆ…
ಒಟ್ಟಿನಲ್ಲಿ ಹೇಳಬೇಕು ಅಂದ್ರೆ, ಪ್ರಜ್ವಲ್ ರೇವಣ್ಣರ ಕೊಠಡಿಯಲ್ಲಿ ಕಂಡುಬಂದ ಮೊಬೈಲ್ ಬಳಕೆ ಪತ್ತೆ ಪ್ರಕರಣದಿಂದ ದರ್ಶನ್ ಹಾಗೂ ಪವಿತ್ರಾಗೂ ಜೈಲಿನಲ್ಲಿ ದೊಡ್ಡ ಮಟ್ಟದ ಬದಲಾವಣೆ ಬಿಸಿ ತಟ್ಟಿರೋದಂತೂ ಪಕ್ಕಾ!




