ವಿಧಾನಸಭಾ ಕಲಾಪದ ಅವಧಿಯನ್ನ ವಿಸ್ತರಿಸುವಂತೆ ಆಗ್ರಹಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ಕಾಗೇರಿ ಹಾಗೂ ಸಿಎಂಗೆ ಪತ್ರ ಬರೆದಿದ್ದಾರೆ .
ಸೆಪ್ಟೆಂಬರ್ 21ರಿಂದ ಆರಂಭವಾಗಲಿರೋ ವಿಧಾನಸಭಾ ಕಲಾಪದಲ್ಲಿ ಮಹತ್ವದ ವಿಷಯಗಳ ಚರ್ಚೆ ನಡೆಯಬೇಕಿದೆ.ಹೀಗಾಗಿ ಅಕ್ಟೋಬರ್ 15ರವರೆಗೆ ಕಲಾಪ ವಿಸ್ತರಿಸಿ ಅಂತಾ ಆಗ್ರಹಿಸಿದ್ದಾರೆ. ಕೋವಿಡ್ನಂತಹ ಮಹಾಮಾರಿ ರಾಜ್ಯದಲ್ಲಿ ಅಪ್ಪಳಿಸಿರೋ ಈ ಸಂದರ್ಭದಲ್ಲಿ ರಾಜ್ಯದ ಜನತೆ ನಲುಗಿ ಹೋಗಿದ್ದಾರೆ. ಈ ನಡುವೆ ಡ್ರಗ್ ದಂಧೆ ಕೂಡ ರಾಜ್ಯದಲ್ಲಿ ಮಾರ್ಧನಿಸುತ್ತಿದೆ. ಈ ಎಲ್ಲ ವಿಚಾರಗಳ ಬಗ್ಗೆ ಮಾತನಾಡಬೇಕು ಅಂದರೆ ವಿಧಾನಸಭಾ ಕಲಾಪದ ಅವಧಿಯನ್ನ ವಿಸ್ತರಿಸಲೇಬೇಕಿದೆ ಅಂತಾ ಹೇಳಿದ್ರು.