ಸ್ಯಾಂಡಲ್ ವುಡ್ ಶೋಕ್ದಾರ್ ಧನ್ವೀರ್ ಅವರು ಇತ್ತೀಚೆಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು.. ಈ ಕೊರೋನಾ ಸಮಯದಲ್ಲೂ ಸಾಕಷ್ಟು ಜನ ಅಭಿಮಾನಿಗಳು ಬೇರೆ ಬೇರೆ ಊರುಗಳಿಂದ ಬಂದು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿ ಸಂಭ್ರಮಿಸಿದ್ರು.. ನಟ ಧನ್ವೀರ್, ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಅವರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟು ತಮ್ಮ ಹುಟ್ಚುಹಬ್ಬ ಆಚರಿಸಿಕೊಂಡು ಖುಷಿ ಪಟ್ರು.. ಈ ವೇಳೆ ಕಮಲಾನಗರದ ಜೋಸೆಫ್ ಅನ್ನುವ ಅಭಿಮಾನಿಯೊಬ್ರು ಕೆಲವೇ ನಿಮಿಷಗಳಲ್ಲಿ ನಟ ಧನ್ವೀರ್ ಅವರ ಚಿತ್ರವನ್ನ ಬಿಡಿಸಿ, ಅದನ್ನ ನಟ ಧನ್ವೀರ್ ಅವರಿಗೆ ನೀಡುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದ್ರು..
ತಮ್ಮ ಹುಟ್ಚುಹಬ್ಬದ ವಿಶೇಷತೆಯಲ್ಲಿ ಮಾತನಾಡಿದ ನಟ ಧನ್ವೀರ್, ಕೊರೋನಾ ಇರುವ ಕಾರಣ ಯಾರಿಗೂ ಬರ್ಬೇಡಿ ಅಂತಾನೇ ಹೇಳಿದ್ವಿ.. ಆದ್ರೂ ಮನೆಬಳಿಗೆ ಬಂದು ವಿಶ್ ಮಾಡಿದ್ದಾರೆ.. ಅವರ ಪ್ರೀತಿಗೆ ಬೆಲೆ ಕಟ್ಟೋಕ್ಕಾಗಲ್ಲ ಅಂದ್ರು.. ವಿಶೇಷ ಅಂದ್ರೆ ನಟ ಧನ್ವೀರ್ ಹುಟ್ಟುಹಬ್ಬದ ವಿಶೇಷತೆಯಲ್ಲಿ ಅವರ ನಟನೆಯ ಬಹುನಿರೀಕ್ಷಿತ ಬಂಪರ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡ್ತಿದೆ.. ಪ್ರೇಕ್ಷಕರಿಂದ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.. ಬಂಪರ್ ಚಿತ್ರದ ಟೀಸರ್ ಈ ವರ್ಷ ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಸರ್ಪ್ರೈಸ್ ಗಿಫ್ಟ್ ಅಂತ ಸಂತಸ ವ್ಯಕ್ತಪಡಿಸಿದ್ರು..
ಅಂದಹಾಗೆ ಬಂಪರ್ ಚಿತ್ರವನ್ನ ನಿರ್ದೇಶಕ ಹರಿ ಸಂತೋಷ್ ಡೈರೆಕ್ಟ್ ಮಾಡ್ತಿದ್ದಾರೆ.. ಬಜಾರ್ ಚಿತ್ರದಲ್ಲಿ ಧನ್ವೀರ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ರು.. ಬಂಪರ್ ಸಿನಿಮಾ ಆಕ್ಷನ್ ಅಂಡ್ ಫ್ಯಾಮಿಲಿ ಎಂಟರ್ ಟೇನರ್ ಆಗಿದ್ದು, ಇಲ್ಲಿ ಎರಡು ಶೇಡ್ ಇರುವ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.. ಶ್ರೀ ಜಗದ್ಗುರು ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಪಕ ಸುಪ್ರಿತ್ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ.. ನಾಯಕಿ ಹಾಗೂ ಇತರೆ ಕಲಾವಿದರ ಹುಡುಕಾಟದಲ್ಲಿರುವ ಚಿತ್ರತಂಡ ಇದೇ ನವೆಂಬರ್ ತಿಂಗಳಿನಿಂದ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿಕೊಂಡಿದ್ಯಂತೆ.. ಇನ್ನೂ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ.. ಮುಂದಿನ ವರ್ಷ ಬಂಪರ್ ಸಿನಿಮಾ ತೆರೆಗೆ ಬರಲಿದೆ.. ಒಟ್ಟಾರೆ ನಟ ಧನ್ವೀರ್ ಬರ್ತ್ ಡೇ ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗೇ ನೆರವೇರಿತು..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ