ಸ್ಯಾಂಡಲ್ ವುಡ್ ನ ಎವರ್ಗ್ರೀನ್ ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ಅವರು.. ನೆನ್ನೆಯಷ್ಟೇ ನಟ ರಮೇಶ್ ಅರವಿಂದ್ ಅವರು ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.. ಎಲ್ಲೆಡೆ ಕೊರೋನಾ ವೈರಸ್ ಹರಡುವಿಕೆ ಹೆರಚ್ಚಾಗ್ತಿರುವ ಕಾರಣ ಈ ವರ್ಷ ಬಹುತೇಕ ಸ್ಯಾಂಡಲ್ ವುಡ್ ನಟ, ನಟಿಯರು ತಮ್ಮ ಹುಟ್ಟುಹಬ್ಬವನ್ನ ಅಭಿಮಾನಿಗಳು ಒಟ್ಟಿಗೆ ಸೇರಲು ಆಸ್ಪದ ಕೊಡದೆ ಬಹಳ ಸರಳವಾಗಿ ಆಚರಿಸಿಕೊಳ್ತಿದ್ದಾರೆ.. ಹಾಗೆ ನಟ ರಮೇಶ್ ಅರವಿಂದ್ ಅವರೂ ಸಹ ಈ ವರ್ಷ ಕೊರೋನಾ ಹಾವಳಿಯ ಪರಿಣಾಮ ಅದ್ಧೂರಿ ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿ, ತಮ್ಮ ಕುಟುಂಬದವರೊಂದಿಗೆ ಖುಷಿಯ ಕ್ಷಣಗಳನ್ನ ಕಳೆಯೋದ್ರ ಮೂಲಕ ಸಿಂಪಲ್ ಆಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ.. ವಿಶೇಷ ಅಂದ್ರೆ, ರಮೇಶ್ ಅರವಿಂದ್ ಅವರ ಹುಟ್ಟುಹಬ್ಬಕ್ಕೆ ಅವರ ನಟನೆಯ ಬಹುನಿರೀಕ್ಷಿತ 100 ಚಿತ್ರದ ಪಾರ್ಟಿ ಸಾಂಗ್ ರಿವೀಲ್ ಆಗಿದೆ..
ರಮೇಶ್ ಅರವಿಂದ್ ಸ್ವತಃ ನಿರ್ದೇಶಿಸಿ, ನಾಯಕರಾಗಿ ನಟಿಸ್ತಿರುವ ಬಹುನಿರೀಕ್ಷಿತ ಸಿನಿಮಾ 100.. ಈ ಚಿತ್ರದ ರಂಗು ರಂಗು ಪಾರ್ಟಿಗೆ.. ಅನ್ನುವ ಸಾಲಿನಿಂದ ಆರಂಭವಾಗುವ ಪಾರ್ಟಿ ಸಾಂಗ್ ನ ಲಿರಿಕಲ್ ವೀಡಿಯೋ ಸಾಂಗ್ ಇಂದು ರಮೇಶ್ ಅವರ ಹುಟ್ಟುಹಬ್ಬದ ವಿಶೇಷತೆಯಲ್ಲಿ ರಿವೀಲ್ ಆಗಿದೆ.. ರಮೇಶ್ ಅರವಿಂದ್, ನಟಿ ರಚಿತಾ ರಾಮ್ ಹಾಗೂ ನಟಿ ಪೂರ್ಣ ಈ ಹಾಡಿಗೆ ಸ್ಪೆಪ್ ಹಾಕಿದ್ದಾರೆ.. ಈ ಹಾಡಿನ ಸಾಹಿತ್ಯ ಹಾಗೂ ಹಾಡು ಮೂಡಿಬಂದಿರುವ ರೀತಿ ಬಹಳ ವಿಭಿನ್ನವಾಗಿದೆ.. ಇನ್ನೂ ಈ ಹಾಡಿಗೆ ರವಿ ಬಸ್ರೂರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ರಮೇಶ್ ಅರವಿಂದ್, ಅನನ್ಯ ಭಟ್, ನೀತು ಸುಭ್ರಹ್ಮಣ್ಯಮ್ ಹಾಡಿಗೆ ಧ್ವನಿಯಾಗಿದ್ದಾರೆ..
ಸದ್ಯದ ಪರಿಸ್ಥಿತಿಯಲ್ಲಿ ಸೋಷಿಯಲ್ ಮೀಡಿಯಾಗಳ ಬಳಕೆ ಹೆಣ್ಣು ಮಕ್ಕಳ ಬದುಕಿಗೆ ಹೇಗೆ ಮಾರಕವಾಗುತ್ತಿದೆ ಅನ್ನೋದೇ 100 ಚಿತ್ರದ ಮುಖ್ಯ ಕಥಾವಸ್ತು.. ಈ ಆಕ್ಷನ್ ಎಂಟರ್ ಟೇನ್ಮೆಂಟ್ ಚಿತ್ರದಲ್ಲಿ ನಟ ರಮೇಶ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.. ರಮೇಶ್ ಜೊತೆಗೆ ರಚಿತಾ ರಾಮ್, ಪೂರ್ಣ, ಪೂಜಾ, ಲಕ್ಷ್ಮಿ ಆನಂದ್, ಅಮಿತ್ ರಂಗನಾಥ್, ಸುಕನ್ಯ ಗಿರೀಶ್, ಶಿಲ್ಪಾ ಶೆಟ್ಟಿ, ಪಿ.ಡಿ.ಸತೀಶ್, ರಾಜೇಶ್ ರಾವ್, ಬೇಬಿ ಸ್ಮಯ ಈ ಚಿತ್ರದ ತಾರಾಗಣದಲ್ಲಿದ್ದಾರೆ.. ಈಗಾಗ್ಲೇ 100 ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ತೆರೆಕಾಣಲು ಸಜ್ಜಾಗಿದೆ.. ಕೊರೋನಾ ಹಾವಳಿ ಕೊಂಚ ಕಡಿಮೆಯಾಗಿ ಚಿತ್ರಮಂದಿರಗಳು ಓಪನ್ ಆಗುತ್ತಿದ್ದಂತೆಯೇ ಈ ಸಿನಿಮಾ ಬಿಗ್ ಸ್ಕ್ರೀನ್ ಗೆ ಲಗ್ಗೆ ಇಡಲಿದೆ.. ಸದ್ಯ ರಿಲೀಸ್ ಆಗಿರುವ 100 ಚಿತ್ರದ ಪಾರ್ಟಿ ಸಾಂಗ್ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ