ತುಮಕೂರು : ಜಿಲ್ಲಾಧಿಕಾರಿಯವರಿಗೆ ಮನವಿ ನೀಡುವುದರ ಮೂಲಕ ರಾಜ್ಯ ಸರ್ಕಾರಕ್ಕೆ ಒತ್ತಾಯ ತುಮಕೂರು ಜಿಲ್ಲಾಧಿಕಾರಿ ಕಛೇರಿ ಮುಂದೆ ಕಾರ್ಮಿಕರಿಂದ ಪ್ರತಿಭಟನೆ. ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡುವುದರ ಪ್ರತಿಭಟನೆ.
ಕೋವಿಡ್ 19 ಲಾಕ್ ಡೌನ್ ಸಂತ್ರಸ್ತರಿಗೆ ಪರಿಹಾರ ಹಾಗೂ ಆರ್ಥಿಕ ಪುನಶ್ಚೇತನಕ್ಕೆ ಪರ್ಯಾಯ ನೀತಿಗಳ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳಿಗೆ ಮನವಿನೀಡಲಾಗಿದೆ. ಲಾಕ್ ಡೌನ್ ಪರಿಣಾಮ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುವ ಪರಿಸ್ಥಿತಿ ಎದುರಾಗಿದೆ. ಸಂಘಟಿತ ಕಾರ್ಮಿಕರಿಗೆ ಪೂರ್ಣ ವೇತನ ಸಿಗದೆ ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರವೂ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಗುತ್ತಿಗೆ ಕಾರ್ಮಿಕರು ಉದ್ಯೋಗ ಭದ್ರತೆ ಇಲ್ಲದೆ ಶೇಕಡ 70ರಷ್ಟು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.ಕಾಯಂ ಕಾರ್ಮಿಕರನ್ನು ವಿ ಆರ್ ಎಸ್ ಕೊಟ್ಟು ಮನೆಗೆ ಕಳುಹಿಸಲಾಗುತ್ತಿದೆ. ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಅವರಿಗೆ ಪೂರ್ಣ ವೇತನ ಲಭಿಸಿಲ್ಲ. ಲಾಕ್ ಡೌನ್ ಅವಧಿಯ ನಿಯಮ ಗಳನ್ನು ಫ್ಯಾಕ್ಟರಿಗಳು ಪಾಲನೆ ಮಾಡುತ್ತಿಲ್ಲ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಕೃಷಿ ಸಂಬಂಧಿ ಕಾಯ್ದೆ ಗಳ ತಿದ್ದುಪಡಿ ಗಳಿಂದ ಕಾರ್ಮಿಕರು ರೈತರು ಕೃಷಿಕೂಲಿಕಾರರು ಸಮಸ್ಯೆ ಗಳನ್ನು ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ.
ಕಾಯಂ ಕಾರ್ಮಿಕರನ್ನು ವಿ ಆರ್ ಎಸ್ ಕೊಟ್ಟು ಮನೆಗೆ ಕಳುಹಿಸಲಾಗುತ್ತಿದೆ. ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ ಅವರಿಗೆ ಪೂರ್ಣ ವೇತನ ಲಭಿಸಿಲ್ಲ. ಲಾಕ್ ಡೌನ್ ಅವಧಿಯ ನಿಯಮ ಗಳನ್ನು ಕಾರ್ಖಾನೆಗಳು ಪಾಲನೆ ಮಾಡುತ್ತಿಲ್ಲ. ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮತ್ತು ಕೃಷಿ ಸಂಬಂಧಿ ಕಾಯ್ದೆ ಗಳ ತಿದ್ದುಪಡಿ ಗಳಿಂದ ಕಾರ್ಮಿಕರು ರೈತರು ಕೃಷಿಕೂಲಿಕಾರರು ಸುಗ್ರೀವಾಜ್ಞೆ ಗಳಿಂದ ಸಮಸ್ಯೆಗಳನ್ನು ಎದುರಿಸು ವಂತಹ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸ್ಥಿತಿಯಲ್ಲಿ ಕಾರ್ಖಾನೆಗಳ ಮಾಲೀಕರ ಕಾರ್ಪೊರೇಟ್ ಕುಳಗಳ ಮತ್ತು ಶ್ರೀಮಂತರ ಪರವಾದ ಕಾನೂನುಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ಧೋರಣೆ ನಿಜಕ್ಕೂ ಬೇಸರವಾಗಿದೆ. ಕೊರೋನಾ ವಾರಿಯರ್ ಗಳನ್ನು ಸರ್ಕಾರ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಆಶಾ. ಅಂಗನವಾಡಿ. ಮುನ್ಸಿಪಲ್. ಪಂಚಾಯಿತಿ ನೌಕರರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ.
ರಾಜ್ಯದ ಪಾಲಿನ ಜಿ. ಎಸ್. ಟಿ. ಮೊತ್ತವನ್ನು ಕೇಂದ್ರ ಸರ್ಕಾರ ಪರಿಹಾರ ಕೊಟ್ಟಿಲ್ಲ. ಶಿಕ್ಷಣ ಆರೋಗ್ಯ ರೈಲು ರಸ್ತೆ ವಿದ್ಯುತ್ ದೂರಸಂಪರ್ಕ ವಿಮಾ ನಿಗಮ ಬ್ಯಾಂಕ್ ಮುಂತಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸ ಬೇಕು. ತೆರಿಗೆ ವ್ಯಾಪ್ತಿಗೆ ಬಾರದ ಎಲ್ಲಾ ಕಾರ್ಮಿಕ ಕುಟುಂಬಗಳಿಗೆ ಮಾಸಿಕ 7500 ರೂಗಳನ್ನು ಆರು ತಿಂಗಳ ಕಾಲ ನೀಡಬೇಕು.
ಪ್ರತಿಯೊಬ್ಬರಿಗೂ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರ ಪದಾರ್ಥಗಳನ್ನು ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರಕ್ಕೆ ವಿಸ್ತರಿಸಿ 200 ದಿನಗಳಿಗೆ ಹೆಚ್ಚಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ 10 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು.ಆನ್ ಲೈನ್ ಶಿಕ್ಷಣ ನೆಪದಲ್ಲಿ ಲೂಟಿ ತಡೆಯಬೇಕು. ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಸಂರಕ್ಷಿಸಬೇಕು. ಕೇಂದ್ರೀಕರಣ ವಾಣಿಜ್ಯೀಕರಣ ಮತ್ತು ಕೋಮುವಾದಿ ಕರಣಕ್ಕೆ ಎಡೆಮಾಡುವ ನೂತನ ಶಿಕ್ಷಣ ನೀತಿ 2020 ರದ್ದುಪಡಿಸಬೇಕು.
ಇನ್ನು ಅತ್ತು ಅಲವು ಬೇಡಿಕೆ ಈಡೇರಿಕೆಗಾಗಿ ಎಲ್ಲಾ ಕಾರ್ಮಿಕ ಸಂಘಟನೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿ ತದನಂತರ ಮನವಿಯನ್ನು ತುಮಕೂರಿನ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯ ಜವ್ದಾರಿ ಹೊತ್ತ CITU ಅಧ್ಯಕ್ಷ ಉಮೇಶ್ ಹಾಗೂ ಪದಾಧಿಕಾರಿಗಳು ಮತ್ತು ಇತರೆ ಕಾರ್ಮಿಕ ಸಂಘಟನೆಗಳು ಭಾಗಿಯಾಗಿದ್ದವು.
ವರದಿಗಾರರು: ಕೆ.ರಾಜು. ಕರ್ನಾಟಕ ಟಿವಿ. ತುಮಕೂರು

