Monday, December 23, 2024

Latest Posts

ನಟಿ ಖುಷ್ಬು 10 ವರ್ಷ ಬಿಜೆಪಿ ತೆಗಳಿದ್ರೂ ಇನ್ಮುಂದೆ ಹೊಗಳ್ತಾರೆ

- Advertisement -

ಕರ್ನಾಟಕ ಟಿವಿ : ರಾಜಕಾರಣದಲ್ಲಿ ಎಲ್ಲವೂ ಸಾಧ್ಯ.. ಬೆಳಗ್ಗೆ ಬಾಯಿಗೆ ಬಂದಂತೆ ಬೈದು ಸಾಯಂಕಾಲ ಅವರ ಪಕ್ಕದಲ್ಲೇ ನಿಂತು ಇಂದ್ರ-ಚಂದ್ರ ಅನ್ನುವ ನಾಯಕರು ಬಹಳ ಜನ ನೋಡ್ತರ‍್ತೀವಿ.. ಇದೀಗ ಆ ಸಾಲಿಗೆ ತಮಿಳುನಾಡಿನ ಕಾಂಗ್ರೆಸ್ ನಾಯಕಿ, ನಟಿ ಖುಷ್ಬು ಸೇರ್ಪಡೆಯಾಗಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿ ಅವರ ನೇತೃತ್ವದಲ್ಲಿ ನಟಿ ಖುಷ್ಬು ಬಿಜೆಪಿ ಸೇರ್ಪಡೆಯಾದ್ರು..

ಕಳೆದ 10 ವರ್ಷಗಳಿಂದ ನಿರಂತರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸ್ತಿದ್ದ ಕಾಂಗ್ರೆಸ್ ನಾಯಕಿ, ನಟಿ ಖುಷ್ಬು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ.. 2010ರಲ್ಲಿ ಡಿಎಂಕೆಯಲ್ಲಿದ್ದ ಖುಷ್ಬು, 2014ರ ವೇಳೆಗೆ ಕಾಂಗ್ರೆಸ್ ಸೇರಿದ್ರು.. ಡಿಎಂಕೆಯಲ್ಲಿದ್ದಾಗಲೂ ಮೋದಿ ವಿರೋಧಿಸಿ ಭಾಷಣ ಮಾಡ್ತಿದ್ದ ಖುಷ್ಬು ನಂತರ ಕಾಂಗ್ರೆಸ್ ಸೇರಿದ ನಂತರವೂ ಕಮಲ ಪಕ್ಷದ ವಿರುದ್ಧ ಕಿಡಿ ಕಾರೋದನ್ನ ಮುಂದುವರೆಸಿದ್ರು.. ಇದೀಗ ಕಾಂಗ್ರೆಸ್ ಗೆ ಗುಡ್ ಬೈ ಹೆಳಿದ ನಟಿ, 10 ವರ್ಷ ತೆಗಳಿದ ಬಿಜೆಪಿಯನ್ನ ಹೊಗಳುವ ಕೆಲಸಕ್ಕೆ ಮುಂದಾಗಿದ್ದಾರೆ..

ಕಾಂಗ್ರೆಸ್ ‌ಗೆ ಯಾವುದೇ ನಷ್ಟವಿಲ್ಲ

ಇನ್ನು ಖುಷ್ಬು ರಾಜೀನಾಮೆಯಿಂದ ಕಾಂಗ್ರೆಸ್‌ಗೆ ಯಾವುದೇ ನಷ್ಟವಿಲ್ಲ.. ಯಾಕೆ ಕೇವಲ ನಟಿಯಷ್ಟೆ.. ನಾಯಕಿ ಅಲ್ಲ.. ಹೀಗಾಗಿ ಯಾವುದೇ ನಷ್ಟವಿಲ್ಲ ಅಂತ ತಮಿಳುನಾಡು ಕಾಂಗ್ರೆಸ್ ಕಾಂಗ್ರೆಸ್ ಅಧ್ಯಕ್ಷ ಅಳಗಿರಿ ತಿಳಿಸಿದ್ದಾರೆ..

ತಮಿಳುನಾಡಿನಲ್ಲಿ ಬಿಜೆಪಿ ಭದ್ರಪಡಿಸಲು ಮುಂದಾಗಿರುವ ಬಿ.ಎಲ್ ಸಂತೋಷ್ ಡಿಎಂಕೆ ಎಐಎಡಿಎಂಕೆ ಕಾಂಗ್ರೆಸ್ ನಿಂದ ನಾಯಕರನ್ನ ಬಿಜೆಪಿ ಗೆ ಕರೆ ರ‍್ತಿದ್ದಾರೆ.. ಹಾಗೆಯೇ ಒಳ್ಳೆಯ ಹೆಸರು ಮಾಡಿರುವ ಅಧಿಕಾರಿಗಳನ್ನ ರಾಜೀನಾಮೆ ಕೊಡಿಸಿ ರಾಜಕಾರಣಕ್ಕೆ ಕರೆ ತರ‍್ತಿದ್ದಾರೆ.. ಐಪಿಎಸ್ ಆಫೀಸರ್ ಅಣ್ಣಾಮಲೈ ಈಗಾಗಲೇ ಬಿಜೆಪಿ ಸೇರಿ ಬಲವನ್ನ ತುಂಬಿದ್ದಾರೆ.. ಕಾಲಿಗೆ ಚಕ್ರ ಕಟ್ಟಿಕೊಂಡು ತಮಿಳುನಾಡಿನಲ್ಲಿ ಅಣ್ಣಾಮಲೈ ಪಕ್ಷ ಸಂಘಟನೆ ಮಾಡ್ತಿದ್ದಾರೆ.. ಇದೀಗ ಕಾಂಗ್ರೆಸ್ ವಕ್ತಾರೆಯಾಗಿದ್ದ ಖುಷ್ಬು ಕಮಲ ಪಾಳಯ ಸೇರಿರೋದು ಮತ್ತಷ್ಟು ಜನ ಬಿಜೆಪಿ ಸರ‍್ತಾರೆ ಅನ್ನೋ ಸುಳಿವನ್ನೂ ನೀಡಿದ್ದಾರೆ.. ಜಯಲಲಿತಾ, ಕರುಣಾನಿಧಿ ಇಲ್ಲದ ಮೊದಲ ಚುನಾವಣೆ ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿದ್ದು ಬಿಜೆಪಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆ ಇದೆ..

ಶಿವಕುಮಾರ್ ಬೆಸಗರಹಳ್ಳಿ, ಕರ್ನಾಟಕ ಟಿವಿ

- Advertisement -

Latest Posts

Don't Miss