ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್ ನಿಧನ: ರಾಜಕೀಯ ನಾಯಕರ ಸಂತಾಪ..

ಕಾಂಗ್ರೆಸ್ ಹಿರಿಯ ನಾಯಕ ಅಹಮದ್ ಪಟೇಲ್(71) ಅನಾರೋಗ್ಯ ಕಾರಣದಿಂದಾಗಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಪಟೇಲ್‌ಗೆ ಕೊರೊನಾ ಪಾಸಿಟಿವ್ ಬಂದಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆದಿದ್ದರು. ಆದ್ರೆ ಅಂಗಾಂಗ ವೈಫಲ್ಯವಾಗಿದ್ದ ಕಾರಣಕ್ಕಾಗಿ, ಇಂದು ಮುಂಜಾನೆ ಕೊನೆಯಸಿರೆಳೆದಿದ್ದಾರೆ.

ಹಾಲಿ ರಾಜ್ಯಸಭಾ ಸಂಸದರಾಗಿದ್ದ ಅಹಮದ್ ಪಟೇಲ್, ಒಟ್ಟು 8 ಬಾರಿ ಸಂಸದರಾಗಿದ್ದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಗುಜರಾತ್ ಎಲೆಕ್ಷನ್ ವೇಳೆ ಅಹಮದ್ ಪಟೇಲ್ ಗೆಲ್ಲಲು ಡಿ.ಕೆ.ಶಿವಕುಮಾರ್ ಸಹಾಯ ಮಾಡಿದ್ದರು. ಈ ಕಾರಣಕ್ಕೆ ಅಹಮದ್ ಪಟೇಲ್, ಆ ಚುನಾವಣೆ ಗೆದ್ದಿದ್ದರು.

ಇನ್ನು ಡಿಕೆಶಿ, ಅಹಮ್ಮದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರು ನಮ್ಮ ಪಕ್ಷದ ಶಕ್ತಿಯಾಗಿದ್ದರು. ತಮ್ಮ ಜೀವನವನ್ನು ಪಕ್ಷಕ್ಕಾಗಿ ಮುಡಿಪಾಗಿಟ್ಟಿದ್ದರು. ಆಧಾರ ಸ್ಥಂಭವಾಗಿದ್ದ ಹಿರಿಯ ನಾಯಕನ ಅಗಲಿಕೆ ದುಃಖ ತಂದಿದೆ. ಅವರ ಅಗಲಿಕೆಯ ನೋವನ್ನ ಭರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಸ್ಥರಿಗೆ ನೀಡಲಿ ಎಂದು ಡಿಕೆಶಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಹಮ್ಮದ್ ಪಟೇಲ್ ನಿಧನದಿಂದ ಕಾಂಗ್ರೆಸ್ ಪಕ್ಷ ನಿಷ್ಠಾವಂತ ನಾಯಕನನ್ನು ಮತ್ತು ನಾನು ನಂಬಿಕಸ್ತ ಗೆಳೆಯನನ್ನು ಕಳೆದುಕೊಂಡಿದ್ದೇನೆ. ನನ್ನ ರಾಜಕೀಯ ಬದುಕಿನ ಪ್ರಮುಖ ನಿರ್ಧಾರಕ್ಕೆ ಕಾರಣರಾಗಿದ್ದ ಪಟೇಲ್ ಅವರು ಕೊನೆಯವರೆಗೆ ಹಿತೈಷಿಯಾಗಿದ್ದವರು. ಈ ಸಾವಿನ ದು:ಖ ಮಾತುಗಳನ್ನು ಮೀರಿದ್ದು. ಹೋಗಿಬನ್ನಿ ಪಟೇಲ್‌ಜಿ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ರಾಜಕೀಯ ಗಣ್ಯರು ಅಹಮ್ಮದ್ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

About The Author