ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್ ಕಟ್ ಹೇಳಿರೋ ಕಸ್ತೂರಿ ಮಹಲ್ ಸಿನಿಮಾದ ಫಸ್ಟ್ ಶೆಡ್ಯುಲ್ಡ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

ಪ್ರಾಕೃತಿ ಸೌಂದರ್ಯದ ಸುಂದರ ತಾಣಗಳಾದ ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತಲಿನ ರಮಣೀಯ ಸ್ಥಳಗಳಲ್ಲಿ ಕಸ್ತೂರಿ ಮಹಲ್ ಶೂಟಿಂಗ್ ನಡೆಸಲಾಗಿತ್ತು.

ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿಯಾಗಿ ನಟಿಸ್ತಿದ್ದು, ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್, ಅಕ್ಷರ್ ಸೇರಿದಂತೆ ಮುಂತಾದ ತಾರಾಗಾಣ ಚಿತ್ರದಲ್ಲಿದೆ.
ಚಂದ್ರಲೇಖ ಸಿನಿಮಾದ ಬಳಿಕ ಶಾನ್ವಿ ಮತ್ತೊಮ್ಮೆ ಹಾರಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕ್ಯೂರಿಯಾಸಿಟಿ ದುಪ್ಪಟ್ಟು ಮಾಡಿದೆ. ಅಂದಹಾಗೇ ಕಸ್ತೂರಿ ಮಹಲ್ ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾವಾಗಿದೆ.
-ಮೇಘ.ಎಸ್