ಲವ್ ಮೋಕ್‌ಟೇಲ್ ಸಿನಿಮಾದಲ್ಲಿ ಒಂದಾಗಿದ್ದ ಆದಿ-ನಿಧಿಮಾ ಜೋಡಿ ರಿಯಲ್ ನಲ್ಲಿ ಒಂದಾಗ್ತಿರೋದು ಗೊತ್ತಿರುವ ವಿಷ್ಯವೇ. ಫೆಬ್ರವರಿ 14 ಪ್ರೇಮಿಗಳ ದಿನದಂದು ಹೊಸಬಾಳಿಗೆ ಹೆಜ್ಜೆ ಹಾಕಲು ರೆಡಿಯಾಗಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿದ್ದಾರೆ.

ಶಾಪಿಂಗ್ ಹೊರಟ ಕೃಷ್ಣ-ಮಿಲನಾ
ಮದುವೆ ದಿನಾಂಕ ಸಮೀಪ ಬರ್ತಿದೆ. ಅದಕ್ಕಾಗಿ ಒಂದಷ್ಟು ಪ್ರಿಪರೇಷನ್ ಬೇಡ್ವೇ. ಖಂಡಿತ ಬೇಕು. ಹೀಗಾಗಿ ಮಿಲನ-ಕೃಷ್ಣ ಸದ್ಯ ಶಾಪಿಂಗ್ ಮೂಡ್ ನಲ್ಲಿದ್ದಾರೆ. ತಮಿಳುನಾಡಿಗೆ ಹೋಗಿರೋ ಜೋಡಿ ಕಂಚೀಪುರಂನಲ್ಲಿ ಶಾಪಿಂಗ್ ಮಾಡ್ತಿದ್ದಾರೆ. ಈ ಬಗ್ಗೆ ಸ್ವತಃ ಮಿಲನಾ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವಿಟರ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿರುವ ಮಿಲನ ನಾಗರಾಜ್ ”ಕಾಂಚೀಪುರಂನಲ್ಲಿ ನಮ್ಮ ವಿಶೇಷ ದಿನಕ್ಕೆ ಶಾಪಿಂಗ್ ಮಾಡುತ್ತಿರುವ ವೇಳೆ” ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸದ್ಯ ಲವ್ ಮೋಕ್‌ಟೇಲ್ ಸಕ್ಸಸ್ ಬಳಿಕ ಲವ್ ಮೋಕ್‌ಟೇಲ್ ಪಾರ್ಟ್-2 ಶೂಟಿಂಗ್ ನಡೆಸ್ತಿದ್ದಾರೆ ಈ ಕ್ಯೂಟ್ ಕಪಲ್.