- Advertisement -
ಬಿಟೌನ್ ಫೇಮಸ್ ಸಿಂಗರ್ ನೇಹಾ ಕಕ್ಕರ್ ಮನೆಮೆಚ್ಚಿದ ಹುಡ್ಗ ರೋಹನ್ ಜೊತೆ ಕಳೆದ ಅಕ್ಟೋಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆಯಾಗಿ ಸದ್ಯ ಎರಡು ತಿಂಗಳು ಕಳೆದಿವೆ. ಎರಡು ತಿಂಗಳಿಗೆ ಈ ಕೆಜಿಎಫ್ ಚೆಲುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಹೌದು ನೇಹಾ ತಾಯಿ ಆಗುತ್ತಿರುವ ವಿಷ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ರೋಹನ್ ಪ್ರೀತ್ ಸಿಂಗ್ ಜೊತೆ ನಿಂತು ಬೇಬಿ ಬಂಪ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಆ ಪೋಸ್ಟ್ ಗೆ ಪತಿ ರೋಹನ್ ಹೆಚ್ಚು ಕಾಳಜಿ ವಹಿಸಬೇಕೆಂದು ಕಮೆಂಟ್ ಮಾಡಿದ್ದಾರೆ.

ಅಂದಹಾಗೇ ನೇಹಾ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದು, ರಾಕಿಂಗ್ ಸ್ಟಾರ್ ಯಶ್ ನಟನೆಯ ಬ್ಲಾಕ್ ಬಸ್ಟರ್ ಹಿಟ್ ಕೆಜಿಎಫ್ ಸಿನಿಮಾದ ಹಿಂದಿ ಗಲಿ ಗಲಿ ಕಂಠ ನೀಡಿದ್ದಾರೆ. ಇದಲ್ಲದೇ ಸಾಕಷ್ಟು ಫೇಮಸ್ ಸಾಂಗ್ ನೀಡಿರುವ ಖ್ಯಾತಿ ನೇಹಾ ಕಕ್ಕರ್ ಗಿದೆ.

- Advertisement -