ಚಂದನವನದ ಕ್ಯೂಟ್ ಕಪಲ್ ಗಳ ಪೈಕಿ ಡೈರೆಕ್ಟರ್ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಕೂಡ ಒಬ್ರು. ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ ಡಿಸೆಂಬರ್ 10ರಂದು ಗಂಡು ಮಗು ಜನಿಸಿತ್ತು.. ವಿಶೇಷ ಅಂದ್ರೆ ಪವನ್ ಒಡೆಯರ್ ಹುಟ್ಟುಹಬ್ಬದ ದಿನದಂದೇ ಯುವರಾಜ ಮನೆಗೆ ಆಗಮಿಸಿದ್ದ. ಹೀಗಾಗಿ ಮಗನ ಜನನದಿಂದ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ. ಈ ನಡುವೆಯೇ ಗೂಗ್ಲಿ ಡೈರೆಕ್ಟರ್ ಮನೆಗೆ ಸಚಿವರು ವಿಸಿಟ್ ಕೊಟ್ಟಿದ್ದಾರೆ.
ಪವನ್ ಒಡೆಯರ್ ಮನೆಗೆ ಆರೋಗ್ಯ ಸಚಿವರ ವಿಸಿಟ್..
ಚೊಚ್ಚಲ ಮಗುವಿನ ಆರೈಕೆಯಲ್ಲಿರುವ ಪವನ್ ಹಾಗೂ ಅಪೇಕ್ಷಾ ಪುರೋಹಿತ್ ಮನೆಗೆ ಆರೋಗ್ಯ ಸಚಿವರಾದ ಸುಧಾಕರ್ ಭೇಟಿ ಕೊಟ್ಟಿದ್ದಾರೆ. ಈ ಭೇಟಿ ಹಿಂದಿರುವ ಕಾರಣ ಪವನ್ ಒಡೆಯರ್ ಮಗುವನ್ನು ನೋಡಿ ಹರಸಲು ಬಂದಿದ್ದರು. ಅದರಂತೆ ಮಗುವನ್ನು ನೋಡಿ ಸಂತಸ ಪಟ್ಟ ಸಚಿವರ ವ್ಯಕ್ತಿತ್ವದ ಬಗ್ಗೆ ಪವನ್ ಒಡೆಯರ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಕೆಲಸದ ಒತ್ತಡದ ನಡುವೆ ಮನೆಗೆ ಆಗಮಿಸಿ ಮಗುವಿಗೆ ಆರ್ಶೀವಾದಿಸಿ ಸಚಿವರಿಗೆ ಧನ್ಯವಾದ ಎಂದು ಸುಧಾಕರ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಅಂದಹಾಗೇ ಕೊರೋನಾ ವಾರಿಯರ್ಸ್ ಗಾಗಿ ಸಚಿವ ಸುಧಾಕರ್ ನೇತೃತ್ವದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತುತ ಪಡಿಸಿದ್ದ ‘ಬದಲಾಗು ನೀನು ಬದಲಾಯಿಸು ನೀನು’ ಹಾಡನ್ನು ನಿರ್ದೇಶಕ ಪವನ್ ಒಡೆಯರ್ ನಿರ್ದೇಶನ ಮಾಡಿದ್ದರು. ಹೀಗಾಗಿ ಸಚಿವರು ಹಾಗೂ ನಿರ್ದೇಶಕ ಪವನ್ ಒಡೆಯರ್ ನಡುವೆ ಒಳ್ಳೆ ಬಾಂಧವ್ಯವಿದೆ.
2018ರಲ್ಲಿ ಪವನ್ ಹಾಗೂ ಅಪೇಕ್ಷಾ ಬಾಲಗಕೋಟೆ ಜಿಲ್ಲೆಯ ವಿದ್ಯಾಗಿರಿಯಲ್ಲಿರುವ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.