Saturday, July 12, 2025

Latest Posts

ರಾಕಿಂಗ್ ಸ್ಟಾರ್ ಯಶ್ ಬರ್ತ್ ಡೇಗೆ ಅಭಿಮಾನಿಗಳಿಗೆ ಬಿಗ್ ಗಿಫ್ಟ್… ಜನವರಿ 8ಕ್ಕೆ ಬರ್ತಿದೆ ಕೆಜಿಎಫ್-2 ಟೀಸರ್….!

- Advertisement -

ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್ ಆಸೆಯಂತೆ ಕೊನೆಗೂ ಕೆಜಿಎಫ್-2 ಟೀಸರ್ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಈಗಾಗ್ಲೇ ಕೊನೆ ಹಂತದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಇವತ್ತು ಬೆಳಗ್ಗೆ ಮೆಗಾ ಅಪ್ ಡೇಟ್ ಒಂದನ್ನು ಕೊಟ್ಟಿದೆ. ಅದು ಕೆಜಿಎಫ್ ಚಾಪ್ಟರ್-1 ರಿಲೀಸ್ ಆಗಿದ್ದ ಈ ದಿನ ಯಶ್ ಅಭಿಮಾನಿಗಳಿಗೆ ದೊಡ್ಡ ಕೊಡುಗೆ ನೀಡಿದೆ.

ರಾಕಿಭಾಯ್ ಬರ್ತ್ ಡೇಗೆ ಕೆಜಿಎಫ್-2 ಟೀಸರ್ ರಿಲೀಸ್

ಜನವರಿ 8ರಂದು ನ್ಯಾಷನಲ್ ಸ್ಟಾರ್ ಯಶ್ ಹುಟ್ಟುಹಬ್ಬ. ಈ ದಿನ ಯಶ್ ಫ್ಯಾನ್ಸ್ ಕೆಜಿಎಫ್-2 ಅಪ್ ಡೇಟ್ ಕೊಡದೇ ಇದ್ರೆ ಸುಮ್ಮನೇ ಇರ್ತಾರೆ. ನೋ ಚಾನ್ಸ್. ನಿರ್ದೇಶಕ ಪ್ರಶಾಂತ್ ನೀಲ್ ದುಂಬಾಲು ಬೀಳ್ತಾರೆ. ಏನಾದ್ರೂ ಅಪ್ ಡೇಟ್ ಕೊಡು ಗುರು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಟ್ರೇಂಡ್ ಶುರು ಮಾಡ್ತಾರೆ. ಹೀಗಾಗಿ ಎಲ್ಲವನ್ನು ಮನಗಂಡಿರುವ ಸಿನಿಮಾ ತಂಡ ಯಶ್ ಬರ್ತ್ ಡೇಗೆ ಕೆಜಿಎಫ್-2 ಟೀಸರ್ ರಿಲೀಸ್ ಮಾಡಲು ಪ್ಲಾನ್ ಹಾಕಿಕೊಂಡಿದೆ.

ನರಾಚಿ ಕೋಟೆ.. ಕೆಜಿಎಫ್ ಸಾಮ್ರಾಜ್ಯದ ಒಂದು ಝಲಕ್.. ಇದಕ್ಕಾಗಿ ಒಂದು ವರ್ಷ ಹೆಚ್ಚಿನ ಸಮಯ ತೆಗೆದುಕೊಂಡಿದೆ. ಆದ್ರೆ ನಾವು ಮತ್ತಷ್ಟು ಪ್ರಬಲವಾಗಿ ಬರುತ್ತಿದ್ದೇವೆ. ಜನವರಿ 8ರಂದು ಬೆಳಗ್ಗೆ 10 ಗಂಟೆ 18 ನಿಮಿಷಕ್ಕೆ ಸರಿಯಾಗಿ ಹೊಂಬಾಳೆ ಫಿಲ್ಮಂಸ್ ಯೂಟ್ಯೂಬ್ ನಲ್ಲಿ ಕೆಜಿಎಫ್ ಚಾಪ್ಟರ್-2 ಟೀಸರ್ ರಿಲೀಸ್ ಮಾಡುತ್ತೇವೆ ಅಂತಾ ಪ್ರಶಾಂತ್ ನೀಲ್ ಟ್ವಿಟ್ ಮಾಡಿದ್ದಾರೆ.

- Advertisement -

Latest Posts

Don't Miss