Monday, December 23, 2024

Latest Posts

‘ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ’… ‘ಪ್ರಿಯ’ ಮಡದಿಗೆ ಕಿಚ್ಚನ ಒಲವಿನ ಉಡುಗೊರೆ..

- Advertisement -

ಸ್ಯಾಂಡಲ್ ವುಡ್ ಬಾದ್ ಷಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪ್ರೀತಿಯ ಮಡದಿ ಪ್ರಿಯಾ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಪ್ರಿಯಾ ಬರ್ತ್ ಡೇ ಪ್ರಯುಕ್ತ ಕಿಚ್ಚನ ಭಕ್ತಗಣ ಕಾಮನ್ ಡಿಪಿ ರೆಡಿ ಮಾಡಿ, ಮಾಲಿವುಡ್ ನಟಿ ಮಂಜು ವಾರಿಯರ್ ಹತ್ತಿರ ರಿಲೀಸ್ ಮಾಡಿಸಿದ್ದಾರೆ. ಹೀಗಿರುವಾಗ ಪತ್ನಿ ಹುಟ್ಟುಹಬ್ಬಕ್ಕೆ ಕಿಚ್ಚ ಸ್ಪೆಷಲ್ ಗಿಫ್ಟ್ ಕೊಡದೇ ಇರೋದಿಕ್ಕೆ ಆಗುತ್ತಾ..? ಖಂಚಿತ ಇಲ್ಲ. ಮುದ್ದಿನ ಮಡದಿಗೆ ಕಿಚ್ಚ ಸಂಥಿಂಗ್ ಆಗಿರುವ ಉಡುಗೊರೆ ನೀಡಿದ್ದಾರೆ.

ಪತ್ನಿಗಾಗಿ ಕವಿಯಾದ ಕಿಚ್ಚ

ಪ್ರಿಯಾ ಬರ್ತ್ ಡೇಗಾಗಿ ಸುದೀಪ್ ಹಾಡೊಂದನ್ನು ರೆಡಿ ಮಾಡಿದ್ದಾರೆ. ‘ಮಡದಿಯೋ ಗೆಳತಿಯೋ ಏನೆಂದು ಕರೆಯಲಿ ನಿನ್ನ’ ಎಂಬ ಹಾಡನ್ನು ರಚಿಸಿ ತಮ್ಮದೇ ಕಿಚ್ಚ ಕ್ರಿಯೇಷನ್ ಯ್ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಿದ್ದಾರೆ. ಪತ್ನಿಗೆ ಕಿಚ್ಚ ಕೊಟ್ಟಿರುವ ಸಪ್ರೈಸ್ ಗಿಫ್ಟ್ ನೋಡಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಪತ್ನಿಗೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಬೇಕಿಲ್ಲವೆಂದು ಕಿಚ್ಚನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಂದಹಾಗೇ ಕಿಚ್ಚ ಸುದೀಪ್ ಮತ್ತು ಪ್ರಿಯಾ 2001ರ ಅಕ್ಟೋಬರ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಸಾನ್ವಿ ಎಂಬ ಹೆಣ್ಣು ಮಗಳಿದ್ದಾಳೆ.

- Advertisement -

Latest Posts

Don't Miss