Friday, December 27, 2024

Latest Posts

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮನೆಗೆ ಹೊಸ ವರ್ಷಕ್ಕೆ ಬಂದ ಹೊಸ ಅತಿಥಿ ಯಾರು ಗೊತ್ತಾ..?

- Advertisement -

ಕರುನಾಡ ಕ್ರಶ್ ರಶ್ಮಿಕಾ ಮಂದಣ್ಣ ಗೂಗಲ್ ನ್ಯಾಷನಲ್ ಕ್ರಶ್ ಆದ್ಮೇಲೆ ಫುಲ್ ಬ್ಯೂಸಿಯೆಸ್ಟ್ ನಟಿಯಾಗಿದ್ದಾಳೆ. ಸೌತ್ ಇಂಡಸ್ಟ್ರೀಯಲ್ಲಿ ಹಲ್ ಚಲ್ ಎಬ್ಬಿಸ್ತಿರೋ ಈ ಪೊಗರು ಬ್ಯೂಟಿ ಈಗ ಬಾಲಿವುಡ್ ಅಂಗಳದಲ್ಲೂ ಸೆನ್ಸೇಷನಲ್ ಕ್ರಿಯೇಟ್ ಮಾಡೋದಿಕ್ಕೆ ರೆಡಿಯಾಗಿದ್ದಾಳೆ. ಸದ್ಯ ರಶ್ಮಿಕಾ ಭತ್ತಳಿಕೆಯಲ್ಲಿ ಏಳೆಂಟು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಈ ನಡುವೆ ರಶ್ಮಿಕಾ ಹೊಸ ವರ್ಷಕ್ಕೆ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾಳೆ.

ರೇಂಜ್ ರೋವರ್ ಕಾರು ಖರೀದಿಸಿದ ಕಿರಿಕ್ ಬೆಡಗಿ

ಕಿರಿಕ್ ಬೆಡಗಿ ರಶ್ಮಿಕಾ ಹೊಸ ಕಾರಿನ ಒಡತಿಯಾಗಿದ್ದಾಳೆ. ಸ್ವತಃ ಈ ವಿಷ್ಯವನ್ನು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಹಂಚಿಕೊಂಡಿದ್ದಾಳೆ. ”ಸಾಮಾನ್ಯವಾಗಿ ಇಂತಹ ವಿಷಯಗಳನ್ನು ನಾನು ನನ್ನಲ್ಲೇ ಇಟ್ಟುಕೊಳ್ಳುತ್ತೇನೆ, ಆದ್ರೆ, ಈ ಸಲ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನಿಸಿತು. ಏಕಂದ್ರೆ ನನ್ನ ಈ ಪಯಣದಲ್ಲಿ ನೀವು ಜೊತೆಯಾಗಿದ್ದೀರಾ. ನನ್ನ ಜೀವನದ ಭಾಗವಾಗಿದ್ದೀರಾ. ನೀವು ತಿಳಿದುಕೊಳ್ಳಬೇಕು. ಈ ಪ್ರಯಾಣದ ಭಾಗವಾಗಿದ್ದಕ್ಕಾಗಿ ಮತ್ತು ನಿಮ್ಮವಳು ಎನ್ನುವಂತೆ ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ಬರೆದುಕೊಂಡಿರುವ ರಶ್ಮಿಕಾ, ಮ್ಯಾಟ್ ಬ್ಲಾಕ್ ಕಲರ್ ರೇಂಜ್ ರೋವರ್ ಕಾರಿನ ಜೊತೆಗಿರುವ ಫೋಟೋ ಹಾಕಿದ್ದಾಳೆ. ಅಂದಹಾಗೇ ಈ ಕಾರಿನ ಬೆಲೆ ಮಾರುಕಟ್ಟೆಯಲ್ಲಿ 80 ಲಕ್ಷದಿಂದ 1 ಕೋಟಿವರೆಗಿದೆ.

ಅಂದಹಾಗೇ ರಶ್ಮಿಕಾ ಕಳೆದ ಮೂರು ವರ್ಷಗಳ ಹಿಂದೆ ಕಿರಿಕ್ ಪಾರ್ಟಿ ಸಕ್ಸಸ್ ಆಗಿ ರಕ್ಷಿತ್ ಜೊತೆ ಉಂಗುರ ಬದಲಿಸಿಕೊಂಡಾಗ ಅಂದ್ರೆ 2017ರಲ್ಲಿ ಕೆಂಪು ಬಣ್ಣದ ಆಡಿ ಕಾರು ಖರೀದಿ ಮಾಡಿದ್ದಳು.

- Advertisement -

Latest Posts

Don't Miss