ಕಿಸ್ ಬ್ಯೂಟಿ, ಭರಾಟೆ ಬೆಡಗಿ ಶ್ರೀಲೀಲಾ ಗಾಂಧಿನಗರದಿಂದ ಇದೀಗ ಡೈರೆಕ್ಟರ್ ಆಗಿ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಕಿಸ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾಪರ್ಣೆ ಮಾಡಿದ ಶ್ರೀಲೀಲಾ ಮೊದಲ ಸಿನಿಮಾದಲ್ಲಿ ಪ್ರೇಕ್ಷಕರ ಮನಸ್ಸು ಕದ್ದಾಕೆ. ಆ ಬಳಿಕ ಶ್ರೀಮುರುಳಿ ಜೊತೆ ಭರಾಟೆ ಸಿನಿಮಾದಲ್ಲಿ ಮುದ್ದು ಮುದ್ದಾಗಿ ನಟಿಸಿದ ಈ ಬ್ಯೂಟಿ ಸದ್ಯ ಶೋಕ್ದಾರ್ ಧನ್ವೀರ್ ಜೊತೆ ಬೈ-2 ಲವ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ನಡುವೆ ಪ್ರಿನ್ಸ್ ಶ್ರೀಲೀಲಾ ಟಾಲಿವುಡ್ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ.

1996ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಸಿನಿಮಾ ‘ಪೆಳ್ಳಿಸಂದಡಿ’ ಮುಂದುವರೆದ ಭಾಗದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ. ಟಾಲಿವುಡ್ ನ ಖ್ಯಾತ ನಿರ್ದೇಶಕ, ಬರಹಗಾರ, ನಿರ್ಮಾಪಕ, ನೃತ್ಯ ಸಂಯೋಜಕ ಕೆ.ರಾಘವೇಂದ್ರ ರಾವ್ ನಿರ್ಮಾಣ ಮಾಡುತ್ತಿದ್ದು, ‘ಪೆಳ್ಳಿಸಂದಡಿ-2’ ಅನ್ನೋ ಟೈಟಲ್ ಇಡಲಾಗಿದೆ.

ಇನ್ನೂ ‘ಪೆಳ್ಳಿಸಂದಡಿ-2’ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ನಟ ಶ್ರೀಕಾಂತ್ ಪುತ್ರ ರೋಷನ್ ನಾಯಕ ನಟನಾಗಿ ಬಣ್ಣ ಹಚ್ಚಲಿದ್ದು, ರೋಷನ್‌ಗೆ ನಾಯಕಿಯಾಗಿ ಶ್ರೀಲೀಲಾ ಕಾಣಿಸಿಕೊಳ್ಳುತ್ತಿದ್ದಾರೆ. ಗೌರಿ ರೋಣಂಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
1996 ಜನವರಿ 12 ರಂದು ಪೆಳ್ಳಿಸಂದಡಿ ಸಿನಿಮಾ ತೆರೆಕಂಡಿತ್ತು. ಕೆ ರಾಘವೇಂದ್ರ ರಾವ್ ನಿರ್ದೇಶನದಲ್ಲಿ ತಯಾರಾಗಿದ್ದ ಈ ಚಿತ್ರದಲ್ಲಿ ಶ್ರೀಕಾಂತ್ ನಾಯಕನಾಗಿ ಮಿಂಚಿದ್ರೆ, ರಾವಲಿ ಹಾಗೂ ದೀಪ್ತಿ ಭಟ್ನಾಗರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ 25 ವರ್ಷ ಪೂರೈಸಿದ ಹಿನ್ನೆಲೆ ‘ಪೆಳ್ಳಿಸಂದಡಿ-2’ ಸಿನಿಮಾ ಘೋಷಿಸಲಾಗಿದೆ.

ಕನ್ನಡ ಸಿನಿಮಾ ಜೊತೆಗೆ ಟಾಲಿವುಡ್ ಗೂ ಎಂಟ್ರಿ ಕೊಟ್ಟಿರೋ ಪ್ರಿನ್ಸ್ ಶ್ರೀಲೀಲಾ ಕನ್ನಡತಿಯರಾದ ರಶ್ಮಿಕಾ ಮಂದಣ್ಣ, ನಭಾ ನಟೇಶ್, ಶ್ರದ್ಧಾ ಶ್ರೀನಾಥ್ ನಾಯಕಿಯರಂತೆ ಪರಭಾಷೆಯಲ್ಲೂ ಮಿಂಚೋದು ಪಕ್ಕಾ ಎನ್ನುತ್ತಿದ್ದಾರೆ ಸಿನಿಪಂಡಿತರು.
