- Advertisement -
ಕಿಚ್ಚ ಸುದೀಪ್ ಕೇವಲ ನಟನೆ ಮಾತ್ರವಲ್ಲ ಸಮಾಜ ಸೇವೆಯಲ್ಲೂ ಕೈ ಜೋಡಿಸುವ ರಿಯಲ್ ಹೀರೋ. ಕಷ್ಟ ಅಂತಾ ಬಂದಾಗ ಸಹಾಯ ಹಸ್ತ ಚಾಚುವ ಸೂಪರ್ ಸ್ಟಾರ್. ನೆರೆಹೊರೆಯವರು-ಬಂಧು ಬಳಗದವರನ್ನು ಕೇರ್ ಮಾಡೋ ಸುದೀಪ್, ಮಕರ ಸಂಕ್ರಾಂತಿ ಹಬ್ಬದ ಸ್ಪೆಷಲ್ ಆಗಿ ಇಂದು ತಮ್ಮ ಬಾಡಿಗಾರ್ಡ್ ಗೆ ಗಿಫ್ಟ್ ವೊಂದನ್ನು ನೀಡಿದ್ದಾರೆ.
ಆರು ವರ್ಷಗಳಿಂದಲೂ ಜೊತೆಯಾಗಿರುವ ಬಾಡಿಗಾರ್ಡ್ ಸಾಯಿ ಕಿರಣ್ ಗೆ ಕಿಚ್ಚ ರಾಯಲ್ ಎನ್ ಫೀಲ್ಡ್ ಬೈಕ್ ಕೊಡಿಸಿದ್ದಾರೆ.
ಅಪ್ಪಟ ಕಿಚ್ಚನ ಅಭಿಮಾನಿಯಾಗಿರುವ ಸಾಯಿ ಕಿರಣ್ ತಮ್ಮ ಹೆಸರಿನ ಮುಂದೆ ಕಿಚ್ಚ ಸಾಯಿ ಕಿರಣ್ ಅಂತಾ ಸೇರಿಸಿಕೊಂಡಿದ್ದು, ಕಿಚ್ಚನನ್ನು ಹೆಚ್ಚು ಪ್ರೀತಿಸುತ್ತಾರೆ.
ಅಂದಹಾಗೇ ಕಿಚ್ಚ ಸುದೀಪ್, ತಮ್ಮ ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.
- Advertisement -