ಮೆಗಾಸ್ಟಾರ್ ಚಿರಂಜೀವಿ ನಟನೆಯ ಬಹುನಿರೀಕ್ಷಿತ ಸಿನಿಮಾ ಆಚಾರ್ಯ. ಸದ್ಯ ಆಚಾರ್ಯ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಈ ಸಿನಿಮಾಕ್ಕೆ ರಾಮ್ ಚರಣ್ ಬಂಡವಾಳ ಹೂಡಿದ್ದಾರೆ. ಚಿರುಗೆ ಜೋಡಿಯಾಗಿ ಕಾಜಲ್ ಅಗರವಾಲ್ ನಟಿಸ್ತಿರೋ ಈ ಚಿತ್ರಕ್ಕೆ ಸದ್ಯ ಕನ್ನಡ ಖ್ಯಾತ ನಟರೊಬ್ಬರು ಎಂಟ್ರಿ ಕೊಟ್ಟಿದ್ದಾರೆ.
ಚಿರು ಸಿನ್ಮಾದಲ್ಲಿ ಭಜರಂಗಿ ಲೋಕಿ
ಕನ್ನಡ ಚಿತ್ರರಂಗದಲ್ಲಿ ಭಜರಂಗಿ ಲೋಕಿ ಎಂದೆ ಫೇಮಸ್ ಆದ ಸೌರವ್ ಲೋಕೇಶ್ ಆಚಾರ್ಯ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಮಾಹಿತಿ ಚಿತ್ರತಂಡದಿಂದ ಹೊರ ಬಿದ್ದಿಲ್ಲ. ಬಟ್, ಲೋಕಿ ಈಗಾಗ್ಲೇ ತಮ್ಮ ಮೊದಲ ತೆಲುಗು ಚಿತ್ರ ಆಚಾರ್ಯ ಶೂಟಿಂಗ್ ಮುಗಿಸಿದ್ದಾರೆ ಎನ್ನಲಾಗ್ತಿದೆ.
ಚಿರು ಎದುರು ತೊಡೆತಟ್ಟಿದ ಕನ್ನಡದ ಖಳನಟ
ಎ.ಹರ್ಷ ನಿರ್ದೇಶನದ ಭಜರಂಗಿ ಸಿನಿಮಾದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಸೌರವ್ ಲೋಕೇಶ್ ಆಚಾರ್ಯ ಸಿನಿಮಾದಲ್ಲೂ ವಿಲನ್ ಆಗಿ ಮಿಂಚಲಿದ್ದಾರಂತೆ. ಇನ್ನೂ, ನಟ ಸೋನು ಸೂದ್ ಕೂಡ ಖಳ ನಟನ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.
ಈಗಾಗ್ಲೇ ಕನ್ನಡದ ಸ್ಟಾರ್ ಹೀರೋಗಳ ಪರಭಾಷೆಯಲ್ಲಿ ಮಿಂಚುತ್ತಿದ್ದು, ಇದೀಗ ಭಜರಂಗಿ ಲೋಕಿ ಖ್ಯಾತಿಯ ಸೌರವ್ ಲೋಕೇಶ್ ಕೂಡ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದು, ಡೆಬ್ಯು ಸಿನಿಮಾದಲ್ಲಿಯೇ ಸ್ಟಾರ್ ಹೀರೋ ಮೆಗಾಸ್ಟಾರ್ ಜೊತೆ ಬಣ್ಣಹಚ್ಚಿರೋದು ಸಂತಸದ ವಿಷಯ.