Saturday, July 5, 2025

Latest Posts

ಇನ್ಮುಂದೆ ಥಿಯೇಟರ್ ಹೌಸ್ ಫುಲ್…! ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್…!

- Advertisement -

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯ ಇಳಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಥಿಯೇಟರ್ ಗಳಲ್ಲಿ 100% ಪ್ರೇಕ್ಷಕರ ಅನುಮತಿಗೆ ಅವಕಾಶ ನೀಡಿದೆ. ಅನ್ ಲಾಕ್ ಬಳಿಕ ಕೇವಲ 50% ಪ್ರೇಕ್ಷಕರಿಗೆ ಅವಕಾಶ ನೀಡಿತ್ತು. ಇದೀಗ ಆ ನಿರ್ಧಾರ ಹಿಂಪಡೆದಿದ್ದು, ಪೂರ್ಣ ಪ್ರಮಾಣದ ಪ್ರೇಕ್ಷಕರ ಅನುಮತಿಗೆ ಒಪ್ಪಿಗೆ ನೀಡಿದೆ.

ಕೊರೋನಾ ಲಾಕ್ ಡೌ ನ್ ಬಳಿಕ ಎಂಟು ತಿಂಗಳ ಬಳಿಕ ಅಂದ್ರೆ ಅಕ್ಟೋಬರ್ ನಿಂದ ಥಿಯೇಟರ್ ಗಳು ಪುನಾರಂಭವಾಗಿರುವಿದ್ದು, ಕೇವಲ 50% ಪ್ರೇಕ್ಷಕರಿಗೆ ಅವಕಾಶ ನೀಡಿತ್ತು. ಇದೀಗ 100% ಅವಕಾಶ ನೀಡಿರುವುದು ಸಿನಿಮಾ ಮಂದಿಗೆ ಖುಷಿ ಕೊಟ್ಟಿದೆ.

ಈ ಹಿಂದೆ ತಮಿಳುನಾಡು, ಆಂಧ್ರ-ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು 100% ಪ್ರೇಕ್ಷಕರ ಅನುಮತಿ ನೀಡುವ ಪ್ರಯತ್ನ ಮಾಡಿದ್ದವು. ಆದ್ರೆ ಕೇಂದ್ರ ಸರ್ಕಾರ ಈ ಬಗ್ಗೆ ಒಪ್ಪಿಗೆ ನೀಡಿರಲಿಲ್ಲ.

- Advertisement -

Latest Posts

Don't Miss