ಕೊರೋನಾ ಲಾಕ್ ಡೌನ್ ಬಳಿಕ ಕೇಂದ್ರ ಸರ್ಕಾರ ಥಿಯೇಟರ್ ನಲ್ಲಿ 100% ಸೀಟು ಸಾಮಾರ್ಥ್ಯಕ್ಕೆ ಇತ್ತೀಗೆಷ್ಟೇ ಅನುಮತಿ ಕೊಟ್ಟಿತ್ತು. ಆದ್ರೀಗ ಕೇಂದ್ರ ಕೊಟ್ಟರೂ ರಾಜ್ಯ ಸರ್ಕಾರ ಕೊಡಲು ರೆಡಿಯಾಗಿಲ್ಲವೆಂದು ಗಾಂಧಿನಗರದ ಮಂದಿ ಬೇಸರಪಟ್ಟುಕೊಂಡಿದ್ದಾರೆ. ಫೆಬ್ರವರಿ 1 ರಿಂದಲೇ ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಪ್ರೇಕ್ಷಕರು ಥಿಯೇಟರ್ ಅಂಗಳಕ್ಕೆ ಬರಬಹುದೆಂಬ ಆದೇಶಕ್ಕೆ ರಾಜ್ಯ ಸರ್ಕಾರ ಹೊಸದೊಂದು ಆದೇಶ ಹೊರಡಿಸಿದೆ. ಈ ತಿಂಗಳಾದ್ಯಂತವರೆಗೆ ಥಿಯೇಟರ್ ನಲ್ಲಿ 50% ಪ್ರೇಕ್ಷಕರಿಗಷ್ಟೆ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಹೊಸ ರೂಲ್ಸ್ ಜಾರಿಗೆ ತಂದಿದೆ.
ಈ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಭರ್ಜರಿ ಹುಡ್ಗ ಧ್ರುವ ಸರ್ಜಾ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಧ್ರುವ, ಮಾರ್ಕೆಟ್‍ನಲ್ಲಿ ಗಿಜಿ ಗಿಜಿ ಜನ… ಬಸ್ಸಿನಲ್ಲೂ ಫುಲ್ ರಶ್… ಆದ್ರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ ಎಂದು ಸರ್ಕಾರವನ್ನು ಪ್ರಶ್ನಿಸಿ ಮುಖ್ಯಮಂತ್ರಿ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಸುಧಾಕರ್ ಗೆ ಟ್ಯಾಗ್ ಮಾಡಿದ್ದಾರೆ.
ಅಂದಹಾಗೇ ಧ್ರುವ ಸರ್ಜಾ ಸತತ ಮೂರು ವರ್ಷಗಳಿಂದ ಪರಿಶ್ರಮ ಹಾಕಿ ಮಾಡಿರೋ ಪೊಗರು ಸಿನಿಮಾ ಇದೇ ತಿಂಗಳ 19ರಂದು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲೂ ತೆರೆಗೆ ಬರಲು ರೆಡಿಯಾಗಿದೆ. ಈ ನಡುವೆ ಕೇಂದ್ರ ಓಕೆ ಅಂದ್ರೂ ರಾಜ್ಯ ಸರ್ಕಾರ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ.