ಕನ್ನಡದ ಆರಡಿ ಕಟೌಟ್.. ಬಾದ್ ಷಾ.. ಮಾಣಿಕ್ಯ, ಅಭಿನಯ ಚಕ್ರವರ್ತಿ.. ದಾದಾ ಸಾಹೇಬ್ ಪಾಲ್ಕೆ ಪುರಸ್ಕೃತ, ಕನ್ನಡ ಕಲಾಭೂಷಣ, ರನ್ನ, ನಟನಾ ಚತುರಾಧಿಪತಿ ಹೀಗೆ ಸಾಕಷ್ಟು ಬಿರುದುಗಳನ್ನು ಮುಡಿಗೇರಿಸಿಕೊಂಡ ನಟ, ನಿರ್ದೇಶಕ, ನಿರ್ಮಾಪಕ, ಗಾಯಕ, ಕ್ರೀಡೆಗೂ ಸೈ, ಕುಕ್ಕಿಂಗೂ ಜೈ ಎನ್ನುವ ಸಕಲಕಲಾವಲ್ಲಭ ಕಿಚ್ಚ ಸುದೀಪ್. ಇತ್ತೀಚೆಗಷ್ಟೇ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಲಿಫಾದಲ್ಲಿ ಕನ್ನಡದ ಕೀರ್ತಿ ಹೆಚ್ಚಿಸಿದ ಕಿಚ್ಚನಿಗೆ ಮತ್ತೊಂದು ಬಿರುದು ಒಲಿದು ಬಂದಿದೆ. ದೀಪು ಇನ್ಮುಂದೆ ಕನ್ನಡದ ಕಲಾ ತಿಲಕ.


ಯಸ್, ಸುದೀಪ್ 25 ವರ್ಷದ ಬಣ್ಣದ ಹಾದಿಯ ಸವಿಸವಿನೆನಪುಗಳನ್ನು ಬುರ್ಜ್ ಖಲೀಫ್ದ ಕಟ್ಟಡದಲ್ಲಿ ಅನಾವರಣಗೊಳಿಸಿದೊಂದಿಗೆ ವಿಕ್ರಾಂತ್ ರೋಣನ ಟೀಸರ್ ಝಲಕ್ ರಿಲೀಸ್ ಮಾಡಿದ್ರು. ಯಾವ ಸ್ಟಾರ್ ಹೀರೋಗಳ ಮಾಡದ ಹೊಸದೊಂದು ದಾಖಲೆ ಮಾಡಿದ ಕಿಚ್ಚನಿಗೆ ಅರಬ್ ಸಂಯುಕ್ತ ಸಂಸ್ಥಾನದ ಸಮಸ್ಥ ಅನಿವಾಸಿಗಳು ಹಾಗೂ ಕನ್ನಡ ಪರ ಸಂಘಟನೆಗಳ ಪರವಾಗಿ ದೀಪುವಿನ ಸಾಧನೆಯನ್ನು ಅಭಿನಂದಿಸಿ ಸನ್ಮಾಸಿಸಿ, ಕನ್ನಡದ ಕಲಾ ತಿಲಕ ಬಿರುದು ನೀಡಿ ಗೌರವಿಸಿದ್ದಾರೆ.





