ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಖುಷಿಯಲ್ಲಿರುವ ಕಾಮಿಡಿ ಕಿಂಗ್ ಶರಣ್ ಶರಣ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕನ್ನಡ ಚಿತ್ರರಂಗದ ಹಲವು ತಾರೆಯರು ಅವತಾರ ಪುರುಷನಿಗೆ ವಿಶಸ್ ತಿಳಿಸಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ನಲ್ಲಿ ಶರಣ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಇಂದು ಬರ್ತ್ ಡೇ ಪ್ರಯುಕ್ತ ರಿಲೀಸ್ ಆಗಿರುವ ಶರಣ್ ನಟನೆಯ ಗುರು ಶಿಷ್ಯರು ಸಿನಿಮಾದ ಮೋಷನ್ ಪೋಸ್ಟರ್ ಶೇರ್ ಮಾಡಿದ್ದಾರೆ.
‘ಶರಣ್ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಯಗಳು. ಎಲ್ಲಾ ಕನಸುಗಳು ನನಸಾಗಲಿ ಎಂದು ಆಶಿಸುತ್ತೇನೆ. ಈ ವರ್ಷ ನಿಮಗೆ ಎಲ್ಲವೂ ಒಳ್ಳೆಯದಾಗಲಿ’ ಅಂತಾ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕ ತರುಣ್ ಸುಧೀರ್ ಚೊಚ್ಚಲ ಪ್ರೊಡಕ್ಷನ್ಸ್ ನಲ್ಲಿ ಶರಣ್ ರ ‘ಗುರು ಶಿಷ್ಯರು’ ಸಿನಿಮಾ ಮೂಡಿ ಬರ್ತಿದೆ. ಅಲ್ಲದೇ ಸಿಂಪಲ್ ಸುನಿ ಹಾಗೂ ಶರಣ್ ಕಾಂಬಿನೇಷನ್ ನಲ್ಲಿ ಅವತಾರ ಸಿನಿಮಾ ಕೂಡ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗ್ತಿದೆ.