Wednesday, April 16, 2025

Latest Posts

ರಿಲೀಸ್ ಆಯ್ತು ಶಿವಣ್ಣನ ‘ಭಜರಂಗಿ-2’ ಮೋಷನ್ ಪೋಸ್ಟರ್… ‘ಜಗ್ರವ’ನ ಖದರ್ ಗೆ ಸಿನಿಪ್ರೇಕ್ಷಕರಿಂದ ಜೈಕಾರ್…

- Advertisement -

ನಿರ್ದೇಶಕ ಎ.ಹರ್ಷ ಹಾಗೂ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕಾಂಬಿನೇಷನ್ ನ ಮೋಸ್ಟ್ ಅಪ್ ಕಮ್ಮಿಂಗ್ ಭಜರಂಗಿ-2 ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಖತ್ ಕ್ಯೂರಿಯಾಸಿಟಿ ಹುಟ್ಟಿಸುವ ಮೋಷನ್ ಪೋಸ್ಟರ್ ನಲ್ಲಿ ಕಿರಕಿ ಅನ್ನೋ ಹೊಸ ಪ್ರಪಂಚದ ಅನಾವರಣ ಮಾಡಲಾಗಿದೆ. ಕಿರಕಿ ಸಾಮ್ರಾಜ್ಯದ ದೊರೆ ಜಗ್ರವ.. ಆತನ ಸಹಚರರು..ಬ್ಯಾಗ್ ಗ್ರೌಂಡ್ ಮ್ಯೂಸಿಕ್, ಮೇಕಿಂಗ್ ಎಲ್ಲವೂ ಅದ್ಭುತವಾಗಿ‌‌ ಮೂಡಿ ಬಂದಿದ್ದು, ಮೋಷನ್ ಪೋಸ್ಟರ್ ನೋಡಿ‌ ಸಿನಿರಸಿಕರು ವಾವ್ಹ್ ಎನ್ನುವಂತೆ ಮಾಡಿದೆ.

ಈಗಾಗ್ಲೇ ಭಜರಂಗಿ, ವಜ್ರಕಾಯ ಸಿನಿಮಾದ ಮೂಲಕ ಹಿಟ್ ಜೋಡಿ‌ ಎನಿಸಿಕೊಂಡಿರುವ ಶಿವಣ್ಣ ಹಾಗೂ ನಿರ್ದೇಶಕ ಹರ್ಷ, ಭಜರಂಗಿ-2 ಸಿನಿಮಾ ನಿರೀಕ್ಷೆ ದುಪ್ಪಟ್ಟಾಗಿದೆ.

ಇನ್ನೂ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿಗೆ ಭಾವನಾ ಮೆನನ್, ಶ್ರುತಿ, ಭಜರಂಗಿ ಲೋಕಿ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿದ್ದಾರೆ. ಭಜರಂಗಿ-2 ಸಿನಿಮಾದ ಶೂಟಿಂಗ್ ಮುಗಿದ್ದು, ಮೇ 14ರಂದು ಸಿನಿಮಾ ತೆರೆಗ ಬರಲಿದೆ.

- Advertisement -

Latest Posts

Don't Miss