ಕಿಚ್ಚ ಜೋಯಿಸರು ಫಿಕ್ಸ್ ಮಾಡಿದ್ರು ಬಿಗ್ ಬಾಸ್ ಮುಹೂರ್ತ… ಇದೇ 28ಕ್ಕೆ ಶುರುವಾಗ್ತಿದೆ ದೊಡ್ಮನೆ ಆಟ…

ಬಿಗ್ ಬಾಸ್ ಸೀಸನ್-8 ಶುರುವಾಗೋದು ಯಾವಾಗ ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಇದೇ ತಿಂಗಳ 28ರಿಂದ ಕಿರುತೆರೆಯಲ್ಲಿ ದೊಡ್ಮನೆ ಆಟ ಶುರುವಾಗ್ತಿದೆ. ಇವತ್ತು ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಸೀಸನ್-8 ರ ದಿನಾಂಕ ಪ್ರಕಟಿಸಿದೆ.

ಫೆ. 28 ರಂದು ಸಂಜೆ 6 ಗಂಟೆ 01 ನಿಮಿಷಕ್ಕೆ ಗೋಧೂಳಿ ಲಗ್ನದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಲಿದೆ ಎಂದು ಕಿಚ್ಚ ಜೋಷಿಯರು ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಜೋಷಿಯರ ವೇಷ ತೊಟ್ಟಿದ್ದ ಕಿಚ್ಚನ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ರು. ಬಿಗ್ ಬಾಸ್ ಗಾಗಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದ ಕಿಚ್ಚನ ಪ್ರೋಮೋ ನೋಡಿ ಎಲ್ಲರೂ ಇಷ್ಟಪಟ್ಟಿದ್ದಾರೆ.

ಅಂದಹಾಗೇ ನೂರು ದಿನಗಳ ನಡೆಯುವ ದೊಡ್ಮನೆ ಆಟದಲ್ಲಿ ಯಾರು ಯಾರು ಭಾಗವಹಿಸಲಿದ್ದಾರೆ ಅನ್ನೋ ಕುತೂಹಲಕ್ಕೆ ಸದ್ಯದಲ್ಲಿಯೇ ತೆರೆಬೀಳಲಿದೆ.

About The Author