ಕನ್ನಡದ ಮೇರು ನಟ… ಗಂಧದಗುಡಿಯ ಹೀರೋ ಡಾ.ರಾಜ್ ಪ್ರತಿಮೆಗೆ ಶಾಂತಿನಗರದ ಶಾಸಕ ಹ್ಯಾರೀಸ್ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನ ದೊಮ್ಮಲೂರಲ್ಲಿ ಅಣ್ಣಾವ್ರು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದ್ದು, ಆ ಪ್ರತಿಮೆ ಬಳಿ ಪರಿಶೀಲನೆಗೆಂದು ಹೋಗಿದ್ದ ಶಾಸಕರು ವರನಟನ ಬಗ್ಗೆ ನಾಲಿಗೆ ಹರಿಬಿಟ್ಟಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಶಾಸಕರು ಮಾತನಾಡಿರುವ ವಿಡಿಯೋ ನೋಡಿ ಕುಲ ಕೋಟಿ ರಾಜ್ ಭಕ್ತಗಣ ಶಾಸಕರ ವಿರುದ್ಧ ನಿಗಿನಿಗಿ ಕೆಂಡವಾದ್ರು. ಶಾಸಕರ ಹೇಳಿಕೆ ವಿರುದ್ಧ ಅಣ್ಣಾವ್ರ ಅಭಿಮಾನಿಗಳು ತಿರುಗಿಬಿದ್ರು. ಇಷ್ಟಲ್ಲೇ ಆಗ್ತಿದೆ ಶಾಸಕ ಹ್ಯಾರೀಸ್ ಕ್ಷಮೆ ಕೇಳಿದ್ದಾರೆ.
ನಾನು ಅಣ್ಣಾವ್ರ ದೊಡ್ಡ ಅಭಿಮಾನಿ. ಇಂಟರ್‌ನ್ಯಾಷನಲ್ ಅಣ್ಣಾವ್ರು ಅಂದ್ರೆ ರಾಜ್ ಕುಮಾರ್. ಅವರ ಬಗ್ಗೆ ಯಾರಾದರೂ ಮಾತಾಡೋಕೆ ಆಗುತ್ತಾ, ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಕಟ್ ಅಂಡ್ ಪೇಸ್ಟ್ ಮಾಡಿ ಹಾಕ್ತಿದ್ದಾರೆ” ಎಂದು ಹ್ಯಾರೀಸ್ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.