ಹಿರಿಯ ನಟ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ವಿವಾದ ಕುರಿತು ನಿರ್ಮಾಪಕ ಸಂದೇಶ ನಾಗರಾಜ್ ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಜಗ್ಗೇಶ್ ಸುಮ್ಮನಿರದೇ ರಾಯರ ಭಕ್ತ ಅದು ಇದು ಎಂತಾ ಹೇಳೋದು ತಪ್ಪು. ಸಿನಿಮಾಗೆ ಯಾವ ಜಾತಿ, ಪಕ್ಷ ಸಮುದಾಯವಿಲ್ಲ. ಜಗ್ಗೇಶ್ , ದರ್ಶನ್ ಅಣ್ಣತಮ್ಮಂದಿರಿದ್ದಂತೆ. ದರ್ಶನ್ ಈವರೆಗೂ ಎಲ್ಲೂ ಈ ಬಗ್ಗೆ ಮಾತನಾಡಿಲ್ಲ. ಈ ಬಗ್ಗೆ ನಾನು ಜಗ್ಗೇಶ್ ಅವರಿಗೆ ಫೋನ್ ಮಾಡಿ ಬುದ್ಧಿ ಹೇಳುತ್ತೇನೆ.
ದರ್ಶನ್ ಅಭಿಮಾನಿಗಳು ಜಗ್ಗೇಶ್‌ಗೆ ಮುತ್ತಿಗೆ ಹಾಕುವುದು ದರ್ಶನ್‌ಗೆ ಗೊತ್ತಿರಲಿಲ್ಲ. ಗೊತ್ತಿದ್ರೆ ಮಾಡಬೇಡಿ ಅಂತ ಹೇಳುತ್ತಿದ್ದರು. ಈ ವಿಚಾರ ಇಲ್ಲಿಗೆ ಕೈಬಿಡಿ ಅಂತ ಇವತ್ತು ಜಗ್ಗೇಶ್‌ಗೆ ಮಾಧ್ಯಮಗಳ ಮೂಲಕವೂ ಮನವಿ ಮಾಡುತ್ತೇನೆ. ಇಬ್ಬರನ್ನೂ ಕೂರಿಸಿ ನಾನು ಪತ್ರಿಕಾಗೋಷ್ಠಿ ಮಾಡುತ್ತೇನೆ.
ದರ್ಶನ್ ಅವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ಅವರು ಈ ಬಗ್ಗೆ ಮಾತನಾಡಲು ಇಷ್ಟವಿಲ್ಲ. ಅವರೇ ಏನೋ ಮಾಡಿಕೊಳ್ಳುತ್ತಿದ್ದಾರೆ, ಮಾಡಿಕೊಳ್ಳಲಿ ಎಂದಿದ್ದಾರೆ. ಅಲ್ಲದೇ ಮಾಧ್ಯಮಗಳಿಗೆ ಹೇಳಿಕೆ ನೀಡದೇ ಇದ್ದರೂ ವೈಯಕ್ತಿಕವಾಗಿ ಅಭಿಮಾನಿಗಳಿಗೆ ಕರೆ ಮಾಡಿ ಬುದ್ಧಿ ಹೇಳಿದ್ದಾರೆ. ನನ್ನ ಮಾತಿಗೆ ದರ್ಶನ್ ಅವರು ಗೌರವ ನೀಡುತ್ತಾರೆ ಎಂಬ ವಿಶ್ವಾಸವಿದೆ. ದರ್ಶನ್‌ಗೆ ನಾನೇ ಹೇಳ್ತೀನಿ, ಒಂದು ಹೇಳಿಕೆ ನೀಡಿ ವಿವಾದಕ್ಕೆ ಬ್ರೇಕ್ ಮಾಡುವಂತೆ ಹೇಳ್ತೀನಿ ಎಂದು ಸಂದೇಶ್ ನಾಗರಾಜ್ ಹೇಳಿದರು.