Friday, September 20, 2024

Latest Posts

ಕೇಂದ್ರ ಸರ್ಕಾರದಿಂದ ವೃದ್ಧರಿಗೆ ಮದ್ಯಾಹ್ನದ ಬಿಸಿ ಊಟ

- Advertisement -

ಅಂಗನವಾಡಿ ಮತ್ತು ಸರ್ಕಾರಿ ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ಪೌಷ್ಟಿಕಾಂಶವಳ್ಳ ಮದ್ಯಾಹ್ನದ ಬಿಸಿ ಊಟ ವಿತರಿಸುತ್ತಿರುವ ಸರ್ಕಾರ, ಮಾತೃ ಪೂರ್ಣ ಯೋಜನೆಯನ್ನು ಜಾರಿಗೆ ತಂದು ಗರ್ಭಿಣಿ ಮಹಿಳೆಯರಿಗೆ ಮೊಟ್ಟೆ, ತರಕಾರಿ ಸಹಿತ ಪೌಷ್ಟಿಕ ಆಹಾರ ನೀಡುತ್ತಿದೆ. ಇನ್ನೊಂದು ಹೆಜ್ಜೆ ಮುಂದೆ ಇಟ್ಟಿರುವ ಕೇಂದ್ರ ಸರ್ಕಾರ ಹೊಸ ಯೋಜನೆಯ ಮೂಲಕ ಅನಾಥವಾಗಿರುವ ವೃದ್ಧರಿಗೆ ಮದ್ಯಾಹ್ನದ ಬಿಸಿ ಊಟ ನೀಡಿ ಹೊಟ್ಟೆ ತುಂಬಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಕೂಲಿ ಕಾರ್ಮಿಕರ ಮತ್ತು ಬಡವರ ಹಸಿವನ್ನು ನೀಗಿಸುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ತೆರೆದು ಕಡಿಮೆ ವೆಚ್ಚದಲ್ಲಿ ಮೂರು ಹೊತ್ತು ಊಟ ನೀಡುವ ಮೂಲಕ ಈ ವರ್ಗದ ಜನರಿಗೆ ನೆರವಾಗಿತ್ತು.

60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮಾಸಿಕ ವೇತನ ನೀಡುತ್ತಿರುವ ಸರ್ಕಾರ, ಇನ್ನೊಂದು ಹೊಸ ಯೋಜನೆಯ ಮೂಲಕ ಅನಾಥವಾಗಿರುವ ವೃದ್ಧರಿಗೆ ಹೊಟ್ಟೆ ತುಂಬಿಸಲು ಮುಂದಾಗಿದೆ.

ವೃದ್ಧ ತಂದೆ ತಾಯಿಯನ್ನು ಮಕ್ಕಳು ಬೀದಿಪಾಲು ಮಾಡುವ ಮತ್ತು ವೃದ್ಧಾಶ್ರಮಕ್ಕೆ ಸೇರಿಸುವ ಪ್ರವೃತ್ತಿಯು ದೇಶದಲ್ಲಿ ಹೆಚ್ಚಾಗಿದ್ದು, ಆಹಾರದ ಸಮಸ್ಯೆಯನ್ನು ಎದುರಿಸುತ್ತಿರುವ ಅನಾಥ ವಯೋವೃದ್ಧರು ಹಸಿವಿನಿಂದ ಬಳಲಬಾರದು ಎಂದು ತೀರ್ಮಾನಿಸಿ ಮದ್ಯಾಹ್ನದ ಸಮಯದಲ್ಲಿ ಬಿಸಿ ಬಿಸಿ ಪೌಷ್ಟಿಕ ಆಹಾರ ವಿತರಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ದಪಡಿಸಿದೆ.

ವೃದ್ಧರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸ್ಟಾರ್ಟ್ ಅಪ್, ವೃದ್ಧರಿಗೆ ಸಹಾಯ ಮಾಡಲು ಸ್ವ-ಸಹಾಯ ಗುಂಪುಗಳ ಮೂಲಕ ಯೋಜನೆಯನ್ನು ಜಾರಿಗೆ ತರಲು ಚಿಂತಿಸಿದೆ.

ಹಿರಿಯ ನಾಗರಿಕ ಕಲ್ಯಾಣ ನಿಧಿಯ ಅಂತರ್ ಸಚಿವಾಲಯ ಸಮಿತಿಯು 2021 ರ ಫೆಬ್ರವರಿ 4 ರಂದು ವೃದ್ಧರ ಪೋಷಣ ಅಭಿಯಾನ ಯೋಜನೆಗೆ ಅನುಮೋದನೆ ನೀಡಿದೆ.

ಫಲಾನುಭವಿಗಳನ್ನು ಗುರುತಿಸುವ ಹೊಣೆಯನ್ನು ಆಯಾ ಗ್ರಾಮ ಪಂಚಾಯಿತಿ ಮತ್ತು ಮುನ್ಸಿಪಾಲಿಟಿಗಳಿಗೆ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಅನಾಥರು ಮತ್ತು ಅಪೌಷ್ಟಿಕತೆಯಿಂದ ಬಳಲುವ ಹಾಗೂ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯದ ವೃದ್ಧರನ್ನು ಗುರುತಿಸಿ ಅವರಿಗೆ ಪ್ರತಿದಿನ ಮದ್ಯಾಹ್ನ ಬಿಸಿ ಊಟ ಒದಗಿಸಲಾಗುತ್ತದೆ.

ಮೊದಲು ವೃದ್ಧಾಶ್ರಮವಿಲ್ಲದ ಪ್ರದೇಶಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.

- Advertisement -

Latest Posts

Don't Miss