ಕಲೆಗೆ ಯಾವುದೇ ಗಡಿ, ಭಾಷೆ ಇರೋದಿಲ್ಲ. ವಿದೇಶದಲ್ಲಿದ್ರೂ ತಮ್ಮ ನೆಚ್ಚಿನ ಅಭಿಮಾನಿಗಳನ್ನು ಆರಾಧಿಸುವ ಅವರ ಸ್ಫೂರ್ತಿ ಪಡೆಯುವ ಅದೆಷ್ಟೋ ಅಭಿಮಾನಿಗಳನ್ನು ನಾವೆಲ್ಲ ನೋಡಿರುತ್ತೇವೆ. ಅದೇ ರೀತಿ ಕನ್ನಡದ ಆರಡಿ ಕಟೌಟ್ ಕಿಚ್ಚ ಸುದೀಪ್ ಸ್ಫೂರ್ತಿ ಪಡೆದ ನೆಚ್ಚಿನ ಅಭಿಮಾನಿ ಮಾಡಿರುವ ಕೆಲಸಕ್ಕೆ ಎಲ್ಲೆಡೆಯಿಂದ ಶಬ್ಬಾಸ್ ಗಿರಿ ಸಿಕ್ತಿದೆ.
ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ವ್ಯಕ್ತಿಯೋರ್ವ ಭಾಷಾಭಿಮಾನ ಮೆರೆದಿದ್ದಾರೆ. ತಮ್ಮ ಕಾರ್ ನಂಬರ್ ಪ್ಲೇಟ್ ಮೆ ಕನ್ನಡ ಅಂತ ಹಾಕಿಸಿದ್ದಾರೆ. ಅಷ್ಟಕ್ಕೂ ಅವರಿಗೆ ಈ ರೀತಿ ಹಾಕಿಸಲು ಸ್ಫೂರ್ತಿಯಾಗಿದ್ದು ಸುದೀಪ್.
ಕಿಚ್ಚ ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಝಲಕ್ ದುಬೈನ ಬುರ್ಜ್ ಖಲೀಫಾ ಮೇಲೆ ಪ್ರದರ್ಶನವಾಗಿತ್ತು. ಇದಕ್ಕೂ ಮುನ್ನ ಬುರ್ಜ್ ಖಲೀಫಾ ಮೇಲೆ ಕನ್ನಡದ ಬಾವುಟ ರಾರಾಜಿಸಿತ್ತು. ಇದರಿಂದ ಸ್ಫೂರ್ತಿ ಪಡೆದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಕನ್ನಡಿಗ ಕಾರಿನ ಮೇಲೆ ಕನ್ನಡ ಎಂದು ಹಾಕಿಸಿದ್ದಾರೆ
ಅಭಿಮಾನಿಯ ಕನ್ನಡಾಭಿಮಾನಕ್ಕೆ ಕಿಚ್ಚ ಧನ್ಯವಾದ ತಿಳಿಸಿದ್ದಾರೆ.