Thursday, June 19, 2025

Latest Posts

ಕೊರೊನಾ ಲಸಿಕೆ ಪಡೆದ ಪ್ರಧಾನಿ ಮೋದಿ

- Advertisement -

ಇಂದಿನಿಂದ ಮೂರನೇ ಹಂತದ ಕೊರೋನಾ ಲಸಿಕಾ ಅಭಿಯಾನ ಶುರುವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಲಸಿಕೆಯನ್ನು ಇಂದು ಬೆಳಿಗ್ಗೆ ತೆಗೆದುಕೊಂಡಿದ್ದಾರೆ.

ಲಸಿಕೆ ಪಡೆದ ಕುರಿತು ಟ್ವಿಟ್ ಮಾಡಿರುವ ಪ್ರಧಾನಿ, ಏಮ್ಸ್ನಲ್ಲಿ ನನ್ನ ಮೊದಲ ಕೊರೊನಾ ಲಸಿಕೆ ಡೋಸ್ನ್ನು ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿರುವ ಮೋದಿ, ಕೊವಿಡ್ 19 ನ ಜಾಗತಿಕ ಹೋರಾಟವನ್ನು ಬಲಪಡಿಸಲು ನಮ್ಮ ವೈದ್ಯರು ಮತ್ತು ವಿಜ್ಞಾನಿಗಳು ಕಡಿಮೆ ಸಮಯವನ್ನು ಹೇಗೆ ಕೆಲಸ ಮಾಡಿದ್ದಾರೆ ಎನ್ನುವುದು ಗಮನಾರ್ಹವಾಗಿದೆ. ಲಸಿಕೆಯನ್ನು ತೆಗೆದುಕೊಳ್ಳು ಅರ್ಹರಾದ ಎಲ್ಲರಿಗೂ ನನ್ನ ಮನವಿ, ಲಸಿಕೆಯನ್ನು ಪಡೆಯುವ ಮೂಲಕ ನಾವು ಕೊರೊನಾ ಮುಕ್ತ ಭಾರತ ಮಾಡೋಣ ಅಂತ ಹೇಳಿದ್ದಾರೆ.

ಸೋಮವಾದಿಂದ ಶುರುವಾಗಿರುವ ಮೂರನೇ ಹಂತದ ಲಸಿಕೆ ಅಭಿಯಾನದಲ್ಲಿ ಹತ್ತು ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಿದೆ. ಈ ಅಭಿಯಾನದಲ್ಲಿ 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟ ವಯಸ್ಸಿನವರಲ್ಲಿ ನಿರ್ದಿಷ್ಟ ರೋಗ ಲಕ್ಷಣಗಳು ಇದ್ದವರಿಗೆ ಲಸಿಕೆ ದೊರೆಯಲಿದೆ. ಸರ್ಕಾರಿ ಅಸ್ಪತ್ರೆಯಲ್ಲಿ ಉಚಿತವಾಗಿ ಲಸಿಕೆ ಸಿಗಲಿದ್ದು, ಖಾಸಗಿ ಅಸ್ಪತ್ರೆಗಳಲ್ಲಿ ಒಂದು ಡೋಸ್ ಲಸಿಕೆಗೆ 250ರೂ ಪಾವತಿಸಬೇಕಿದೆ.

- Advertisement -

Latest Posts

Don't Miss