Friday, November 22, 2024

Latest Posts

ಕರುನಾಡ ಕ್ರಶ್ ಆದ ತೆಲುಗು ಅಮ್ಮಾಯಿ ಮಂಗ್ಲಿ…! ಯಾರು ಈ ಕಪ್ಪು ಸುಂದರಿ‌ ಮಂಗ್ಲಿ…?

- Advertisement -

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮ ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಅಲ್ಲಿ ಎಲ್ಲರನ್ನು ಅಟ್ರ್ಯಾಕ್ಷನ್ ಮಾಡಿದ್ದು, ಆ ಗಾಯಕಿ ಹಾಡು. ಅದೇ ರಾಬರ್ಟ್ ಸಿನಿಮಾದ ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ಕಣ್ಣೇ ಅದಿರಿಂದಿ’.

ಈ ಕಣ್ಣೇ ಅದಿರಿಂದಿ ಹಾಡನ್ನ ತಮ್ಮ ಅದ್ಭುತ ಕಂಠ ಸೀರೆಯ ಮೂಲಕ ಪ್ರದರ್ಶಿಸಿದ ಕಪ್ಪು ಸುಂದರಿ‌ ಮಂಗ್ಲಿ, ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಆಗ್ಬಿಟ್ಟಿದ್ದಾರೆ. ಯಾರ ಸ್ಟೇಟಸ್ ನಲ್ಲಿ ನೋಡಿದ್ರೂ‌ ಮಂಗ್ಲಿಯದ್ದೇ ಸದ್ದು ಸುದ್ದಿ.

ಕಣ್ಣೇ ಅದಿರಿಂದಿ ತೆಲುಗು ವರ್ಷನ್ ಹಾಡಿಗೆ ಕರುನಾಡ ಮಂದಿ‌ ಫಿದಾ ಆಗಿದ್ದಾರೆ. ಕನ್ನಡ ಹಾಡಿಗಿಂತ ಈ ಹಾಡೇ ಬೊಂಬಾಟ್ ಆಗಿದೆ ಎನ್ನುತ್ತಿದ್ದಾರೆ. ಅದ್ರಲ್ಲೂ ಮಂಗ್ಲಿ ಗಾಯನಕ್ಕೆ ಕರುನಾಡ ಮಂದಿ‌ ಫಿದಾ ಆಗಿದ್ದಾರೆ.

ಯಾರು ಮಂಗ್ಲಿ ಗೊತ್ತಾ…?

ಮಂಗ್ಲಿ ಟಾಲಿವುಡ್ ನ ಗಾಯಕಿ. ಸತ್ಯಾವತಿ ರಾಥೋಡ್ ಮಂಗ್ಲಿ ಎಂಬುದು ಇವರ ಮೊದಲ ಹೆಸ್ರು. ಆ ಬಳಿಕ ಇವ್ರು ಮಂಗ್ಲಿ ಅಂತಾ ಖ್ಯಾತಿ ಪಡೆದವರು. ಈಕೆ ಕೇಲವ ಗಾಯಕಿ ಮಾತ್ರವಲ್ಲ ಟಿವಿ ನಿರೂಪಕಿ, ನಟಿಯೂ ಹೌದು.

ಇತ್ತೀಚೆಗೆ ಅಲ್ಲು ಅರ್ಜುನ್ ನಟನೆಯ ‘ಅಲಾ ವೈಕುಂಠಪುರಂಲೋ’ ಸಿನಿಮಾದ ರಾಮುಲೋ ರಾಮುಲೋ ಹಾಡು ಮಂಗ್ಲಿಗೆ ನೇಮೂ, ಫೇಮೂ ತಂದುಕೊಟ್ಟಿತ್ತು.

- Advertisement -

Latest Posts

Don't Miss