www.karnatakatv.net : ಬೆಂಗಳೂರು : ಒಂದು ಕಾಲದ ಚಡ್ಡಿ ದೋಸ್ತಿಗಳ ರೀತಿ ಇದ್ದ ಜಮೀರ್ ಅಹ್ಮದ್ ಖಾನ್ ಹಾಗೂ ಮಾಜಿ ಸಿಎಂ ಕುಮಾರ್ಸವಾಮಿ ನಡುವಿನ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.. ಸದಾಶಿವನಗರ ವ್ಯಾಪ್ತಿಯ ಗೆಸ್ಟ್ ಹೌಸ್ ಬೀಗ ಒಡೆದ ಪ್ರಕರಣಕ್ಕೆ ಸಂಬಂಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ್ದಾರೆ.. ಈ ಹಿಂದೆ ಕುಮಾರಸ್ವಾಮಿಗೆ ಜಮೀರ್ ಅಹ್ಮದ್ ಖಾನ್ ಗೆಸ್ಟ್ ಹೌಸ್ನಲ್ಲಿ ಉಳಿದುಕೊಳ್ಳಲು ಅರೆಂಜ್ ಮಾಡಿದ್ರು.. ಬಹಳ ವರ್ಷಗಳ ಕಾಲ ಕುಮಾರಸ್ವಾಮಿ ಕುಟುಂಬ ಈ ಗೆಸ್ಟ್ ಹೌಸ್ ಬಳಸಿಕೊಳ್ತಿದ್ರು.. ಇಬ್ಬರ ನಡುವಿನ ಮುನಿಸಿನ ನಂತರ ಕುಮಾರಸ್ವಾಮಿ ಆ ಜಾಗವನ್ನ ಖಾಲಿ ಮಾಡಿದ್ರು.. ಮೊನ್ನೆ ಜಮೀರ್ ಅಹ್ಮದ್ ಖಾನ್ ಕುಮಾರಸ್ವಾಮಿಯವನ್ನ ಪಲ್ಟಿಗಿರಿಆಕಿ ಎಂದು ಕರೆದ ಬೆನ್ನಲ್ಲೇ ಕುಮಾರಸ್ವಾಮಿ ಪರಿಷತ್ ಸದಸ್ಯ ಬೋಜೇಗೌಡರ ಮೂಲಕ ಗೆಸ್ಟ್ ಹೌಸ್ ಅನ್ನು ಎರಡು ದಿನಗಳ ಮಟ್ಟಿಗೆ ಎಂಟ್ರಿಯಾಗಲು ಅವಕಾಶ ಕೇಳಿದ್ರು. ಯಾಕಂದ್ರೆ ಕುಮಾರಸ್ವಾಮಿಯವರಿಗೆ ಸೇರಿದ ದಾಖಲೆಗಳು ಅಲ್ಲಿದ್ದ ಕಾರಣ ಕುಮಾರಸ್ವಾಮಿ ಅವಕಾಶ ಕೆಳಿದ್ರು. ಈ ನಡುವೆ ನಿಖಿಲ್ ಕುಮಾರಸ್ವಾಮಿ ತಮ್ಮ ಗನ್ ಮ್ಯಾನ್ ಗಳ ಮೂಲಕ ಗೆಸ್ಟ್ ಹೌಸ್ ಬೀಗ ಒಡೆದು ಎಂಟ್ರಿಯಾಗಿದ್ದಾರೆ.. ಈ ಹಿನ್ನೆಲೆ ತಮ್ಮ ಆಪ್ತ ಕಾರ್ಯದಶರ್ಿ ಮೂಲಕ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.. ಇನ್ನು ಯುಬಿ ಸಿಟಿ ಬಳಿ ಇರುವ ಗೆಸ್ಟ್ ಹೌಸ್ ನಲ್ಲಿ ಕುಮಾರಸ್ವಾಮಿ ಕೆಲ ವರ್ಷ ವಾಸವಾಗಿದ್ರು, ಆ ಗೆಸ್ಟ್ ಹೌಸ್ ಸಹ ನನ್ನದೇ ಅಂತ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ..