www.karnatakatv.net: ರಾಜ್ಯ- ಬೆಂಗಳೂರು- ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಕಂಪನಿಯ ವಿರುದ್ಧ ಆರೋಪವನ್ನ ಸಾಬೀತುಪಡಿಸುವಲ್ಲಿ ವಿಫಲರಾಗಿರುವ ಹಿನ್ನೆಲೆ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೈಸ್ ಕಂಪನಿಗೆ 2 ಕೋಟಿ ಪರಿಹಾರ ಕೊಡಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. 15ನೇ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶ ಮಲ್ಲನಗೌಡರವರು ಈ ಆದೇಶ ಹೊರಡಿಸಿದ್ದಾರೆ. 2012ರಲ್ಲಿ ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಗೆ ಧಕ್ಕೆ ಬರುವಂತೆ ಹೇಳಿಕೆ ನೀಡಿದ್ರು. ಇದರಿಂದ ಕಂಪನಿಯು ಆರೋಪಿಸಿ 10 ಕೋಟಿ ಮಾನನಷ್ಟ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು. ಈ ಆರೋಪವು ಸತ್ಯವೆಂದು ಗೌಡರು ಸಾಬೀತು ಪಡಿಸಲಿಲ್ಲ. ಹೀಗಾಗಿ, ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಈ ತೀರ್ಪು ನೀಡಿದೆ..




