- Advertisement -
www.karnatakatv.net- ಮಂತ್ರಾಲಯ- ಇಂದಿನಿಂದ ಮಂತ್ರಾಲಯದಲ್ಲಿರುವ ರಾಯರ ಸನ್ನಿಧಿಯನ್ನ ತೆರೆಯಲಾಗಿದೆ. ಭಕ್ತಾದಿಗಳಿಗೆ ಗುರುರಾಯರ ದರ್ಶನಕ್ಕೆ ಅವಕಾಶ ಒದಗಿಸಲಾಗಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 9 ಗಂಟೆವೆರಗೂ ಭಕ್ತಾದಿಗಳಿಗೆ ರಾಯರ ದರ್ಶನ ಭಾಗ್ಯ ಸಿಗಲಿದೆ. ಕೊವಿಡ್ ಕಾರಣದಿಂದಾಗಿ ದೇವಾಲಯವನ್ನ ಮುಚ್ಚಲಾಗಿತ್ತು. ಇದೀಗ ಕೊವಿಡ್ ನಿಯಂತ್ರಣಕ್ಕೆ ಬಂದಿರುವ ಸಲುವಾಗಿ ದೇಗುಲವನ್ನ ತೆರೆಯಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಕೋವಿಡ್ ನಿಯಮವನ್ನ ಪಾಲಿಸಿದ್ರೆ ಮಾತ್ರ ಒಳಗಡೆ ಪ್ರವೇಶವಿದ್ದು, ಮಠದ ಪ್ರಾಂಗಣದಲ್ಲಿ ಪ್ರದಕ್ಷಿಣೆಯನ್ನ ನಿಷೇಧಿಸಲಾಗಿದೆ.
- Advertisement -