www.karnatakatv.net: ವಿಜಯವಾಡ:ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಆಂಧ್ರಹೈಕೋರ್ಟ್ 11 ಸುಮೊಟು ಪ್ರಕರಣ ದಾಖಲಿಸಲಾಗಿದೆ. ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷದಲ್ಲಿದ್ದಾಗ ನ್ಯಾಯಾಲಯದ ಬಗ್ಗೆ ಮಾಡಿದ್ದ ಕಮೆಂಟ್ಸ್ ಗಳನ್ನ ಆಧರಿಸಿ ಕೆಳ ನ್ಯಾಯಾಲಯ ಕೇಸ್ ದಾಖಲಿಸಿದೆ. ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾರವರು ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದು, ಹೈಕೋರ್ಟ್ ಆಡಳಿತಾತ್ಮಕ ಸಮಿತಿ ಶಿಫಾರಸ್ಸಿನಂತೆ ಸುಮೊಟು ಕೇಸ್ ದಾಖಲಿಸಿಕೊಳ್ಳಲಾಗಿದೆ.




