Saturday, July 5, 2025

Latest Posts

ಗೋಲ್ಡ್ ಮೆಡಲಿಸ್ಟ್ ಈಗ ಬೀದಿ ವ್ಯಾಪಾರಿ…

- Advertisement -

www.karnatakatv.net: ರಾಷ್ಟ್ರೀಯ- ಕ್ರೀಡೆಯಾಗಲಿ ಅಥವಾ ದೇಶವನ್ನು ಪ್ರತಿನಿಧಿಸುವ ಯಾವುದೇ ಸಹಾಯವಾಗಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಬಂದವರಿಗೆ ಗೌರವ ಸಲ್ಲಿಸಬೇಕಾಗಿರೋದು ಸರ್ಕಾರಗಳ ಕರ್ತವ್ಯ. ಆದ್ರೆ, ಸರ್ಕಾರ ತನ್ನ ಕರ್ತವ್ಯ ಮರೆತ ಪರಿಣಾಮ 28 ಪದಕ ವಿಜೇತೆ ರಸ್ತೆ ಬದಿಯಲ್ಲಿ ಚಿಪ್ಸ್, ಬಿಸ್ಕಟ್ ಮಾರುತ್ತಿದ್ದಾರೆ. ಅವರು ಮತ್ಯಾರು ಅಲ್ಲ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಸಾಧನೆ ಬರೆದ ಪ್ಯಾರಾ ಶೂಟರ್ 34ವರ್ಷದ ದಿಲ್ರಾಜ್ ಕೌರ್. ದಿಲ್ರಾಜ್ ಬದುಕಿನ ನಿರ್ವಹಣೆಗಾಗಿ ತನ್ನ ತಾಯಿಯೊಂದಿಗೆ ಡೆಹ್ರಾಡೂನ್‍ನ ಗಾಂಧಿ ಪಾರ್ಕ್ ನ ರಸ್ತೆ ಬದಿಯಲ್ಲಿ ಜೀವನೋಪಾಯಕ್ಕಾಗಿ ಬಿಸ್ಕೆಟ್, ಚಿಪ್ಸ್ ಮಾರಿ ಬದುಕುತ್ತಿದ್ದಾರೆ. 2004ರಲ್ಲಿ ಪ್ಯಾರಾ ಶೂಟಿಂಗ್ ಪ್ರಾರಂಭಿಸಿದ ಇವರು ಇದುವೆರೆಗೆ ರಾಷ್ಟ್ರೀಯ ಮಟ್ಟದಲ್ಲಿ 28 ಚಿನ್ನ, 8 ಬೆಳ್ಳಿ ಮತ್ತು 3 ಕಂಚಿನ ಪದಕಗಳನ್ನ ಗೆದ್ದಿದ್ದಾರೆ. ಇದೀಗ ಜೀವನೋಪಾಯಕ್ಕಾಗಿ ಸೂಕ್ತ ಉದ್ಯೋಗ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದ್ರೆ, ಇದುವರೆಗೂ ಯಾವುದೇ ರೀತಿಯ ಸಹಾಯ ಸಹಕಾರ ಆಗ್ಲಿ ಇವರ ಮನೆ ಕದ ತಟ್ಟಿಲ್ಲ ಎಂಬುದು ನಿಜಕ್ಕೂ ವಿಪರ್ಯಾಸ.

- Advertisement -

Latest Posts

Don't Miss